ಯುವಕನ ಬಲಿ ಪಡೆದ ಅನೈತಿಕ ಸಂಬಂಧ, ಕೊಲೆಯೋ?ಆತ್ಮಹತ್ಯೆಯೋ?

ಮೃತ ಗಗನ್‌ ಶಂಕರ್.‌
ಮೃತ ಗಗನ್‌ ಶಂಕರ್.‌
Published on

ಚಿಕ್ಕಬಳ್ಳಾಪುರ: ಸುಟ್ಟಗಂಭೀರ ಗಾಯಗಳಿಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದು ಇದರಿಂದ ಬೇಸತ್ತ ಕುಟುಂಬದ ಸಂಬಂಧಿಕರು ಅಕ್ರಮ ಸಂಬಂಧದಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂಬ ಆಕ್ರೋಶದಲ್ಲಿ ಮಹಿಳೆಯ ಮನೆ ನುಗ್ಗಿ ಕಿಟಕಿ ಗಾಜು, ಪೀಠೋಪಕರಣಗಳನ್ನುಧ್ವಂಸಗೊಳಿಸಿದ್ದಾರೆ.

ಗುಡಿಬಂಡೆ  ತಾಲೂಕಿನಹಂಪಸಂದ್ರದ ಗಗನ್ಶಂಕರ್ (೨೭) ಅನುಮಾನಾಸ್ಪದವಾಗಿ ಮೃತಪಟ್ಟ ವ್ಯಕ್ತಿ. ಪ್ರಕರಣ ದಾಖಲಿಸಿಕೊಂಡಿರುವಪೊಲೀಸರು ಆತ್ಮಹತ್ಯೆಯೋ? ಅಥವಾಕೊಲೆಯೋ? ಎಂಬುದನ್ನು ಪತ್ತೆ ಹಚ್ಚಲು ತನಿಖೆ ಕೈಗೊಂಡಿದ್ದಾರೆ.

*ಪ್ರಕರಣದ ಹಿನ್ನೆಲೆ

ಹಂಪಸಂದ್ರದ ಗಗನ್ಶಂಕರ್ (೨೭) ಗ್ರಾಮದ ಮಹಿಳೆಯೊಬ್ಬರೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡಿದ್ದ. ಇದರ ಬಗ್ಗೆಮನೆಯಲ್ಲಿ ಗೊತ್ತಾಗಿ ಗಲಾಟೆಯಾದ ಬಳಿಕ ಪರಿಚಯಸ್ಥೆಯಿಂದ ಅಂತರ ಕಾಪಾಡಿಕೊಂಡಿದ್ದ. ಇದರ ನಡುವೆ ಹೊರಗಡೆಹೋಗಿ ಬರುವುದಾಗಿ ಹೇಳಿ ಹೋದ ಶಂಕರ್‌ ಮನೆಗೆ ವಾಪಸ್ಸಾಗಿಲ್ಲ. ಬದಲಿಗೆ ಫೋನ್‌ ಮಾಡಿ, ನನಗೆ ಬೆಂಕಿಹಚ್ಚಿ ಕೊಲೆ ಮಾಡಲಾಗುತ್ತಿದೆ. ದೇಹ ಸುಡುತ್ತಿರುವುದನ್ನು ತಪ್ಪಿಸಿಕೊಳ್ಳಲು ಸಮೀಪದ ಕುಂಟೆಯ ನೀರಿಗೆಹಾರಿದರೂ ಬಿಡುತ್ತಿಲ್ಲ ಎಂಬ ಮಾಹಿತಿ ನೀಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದರ ನಡುವೆಶಂಕರ್‌ ಜುಗುಪ್ಸೆಯಲ್ಲಿ ಆತ್ಮಹತ್ಯೆ ಮಾಡಿಕೊಂಡನೋ? ಇಲ್ಲವೇ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಹಾಗೂಆಕೆಯ ಗೆಳೆಯ ಆಟೋ ಚಾಲಕ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದರೋ? ಎಂಬ ಪ್ರಶ್ನೆಗಳುಕೇಳಿ ಬರುತ್ತಿವೆ. ಕುಟುಂಬಸ್ಥರು ನೀಡಿದ ದೂರನ್ನಾಧಾರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

*ಮನೆಯ ಧ್ವಂಸ

ಸುಟ್ಟ ಗಂಭೀರ ಗಾಯಗಳಿಂದನೋವು ಅನುಭವಿಸುತ್ತಿದ್ದ ಶಂಕರ್‌ ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ, ಆತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಇದರಿಂದ ಆಕ್ರೋಶಗೊಂಡ ಕುಟುಂಬದ ಸದಸ್ಯರುಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಮನೆ ನುಗ್ಗಿ ಕಿಟಕಿ ಗಾಜು, ಪೀಠೋಪಕರಣ, ಟಿವಿ ಸೇರಿದಂತೆ ಇತರೆವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net