ವಯಸ್ಸಾಗುತ್ತಿದ್ದರೂ ಮದುವೆಯಾಗದ ಹತಾಶೆ, ಪ್ರಾಣ ಬಿಟ್ಟ ಕಾರ್ಮಿಕ

ಆಂಧ್ರ ಮೂಲದ ಪ್ರದೀಪ್ ಮೃತನು.
ಆಂಧ್ರ ಮೂಲದ ಪ್ರದೀಪ್ ಮೃತನು.
Published on

ಚಿಕ್ಕಬಳ್ಳಾಪುರ: ತಾಲೂಕಿನಮುದ್ದೇನಹಳ್ಳಿಯಲ್ಲಿ ಯುವಕನೊಬ್ಬಮದುವೆಯಾಗದ ಜುಗುಪ್ಸೆಯಲ್ಲಿಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆಂಧ್ರ ಮೂಲದ ಪ್ರದೀಪ್ (39) ಮೃತನು.ಪೈಂಟರ್ ಕೆಲಸಮಾಡುತ್ತಿದ್ದ ಈತನುಮದ್ಯವಸನಿಯಾಗಿದ್ದ. ಹಲವುತಿಂಗಳಿಂದಲೂ ಮಾನಸಿಕಖಿನ್ನತೆಗೊಳಗಾಗಿದ್ದು ಕೆಲಸದಜಾಗದ ಮನೆಯಲ್ಲಿನೇಣು ಬಿಗಿದುಕೊಂಡುಮೃತಪಟ್ಟಿದ್ದಾನೆ. ಬಾಗಿಲುತೆಗೆಯದ ಹಿನ್ನೆಲೆಯಲ್ಲಿಅನುಮಾನಗೊಂಡು ಬೀಗಹೊಡೆದು ಒಳಪ್ರವೇಶಿಸಿದಾಗ ಮೃತದೇಹವುನೇಣು ಬಿಗಿದಸ್ಥಿತಿಯಲ್ಲಿ ಕಂಡುಬಂದಿದೆ.

ಕೂಲಿ ಕೆಲಸಕ್ಕಾಗಿ ಆಂಧ್ರದಿಂದ ಮುದ್ದೇನಹಳ್ಳಿಗೆ ಪ್ರದೀಪ್‌ಬಂದಿದ್ದು ಸತ್ಯಸಾಯಿ ವೈದ್ಯಕೀಯ ಸಂಸ್ಥೆಯ ಪ್ರದೇಶದಲ್ಲಿ ಕೈಗೊಂಡಿರುವ ಕಟ್ಟಡ ನಿರ್ಮಾಣದ ಜಾಗದಲ್ಲಿಉಳಿದುಕೊಂಡಿದ್ದು ಕುಡಿದ ನಶೆಯಲ್ಲಿ ಏನೇನೋ ಮಾತನಾಡುತ್ತಿದ್ದ. ಜತೆಗೆ ಬೇಸರವನ್ನೂ ಸಹವ್ಯಕ್ತಪಡಿಸುತ್ತಿದ್ದ. ಇದರಿಂದ ಸಹೋದ್ಯೋಗಿಗಳು ಸಮಸ್ಯೆಯ ಬಗ್ಗೆ ಪ್ರಶ್ನಿಸಿದಾಗ ಯಾವುದೇಮಾತನ್ನು ಹೇಳುತ್ತಿರಲಿಲ್ಲ. ಕುಟುಂಬಸ್ಥರು ಸಾವಿಗೆ ಮದುವೆಯಾಗದಿರುವ ವಿಚಾರ ಪ್ರಮುಖ ಕಾರಣಎಂಬುದಾಗಿ ಹೇಳಿದ್ದಾರೆ. ನಂದಿ ಗಿರಿಧಾಮಠಾಣೆಯ ಪೊಲೀಸರುಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net