ಗಾಳಿ ಮಳೆಗೆ ಬಾಳೆ ಜತೆ ಮಾವು ನಾಶ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

ಮಳೆಗೆ ನೆಲಕ್ಕಚ್ಚಿರುವ ಬಾಳೆ ಬೆಳೆ ಜತೆ ರೈತ
ಮಳೆಗೆ ನೆಲಕ್ಕಚ್ಚಿರುವ ಬಾಳೆ ಬೆಳೆ ಜತೆ ರೈತ
Published on

ಚಿಕ್ಕಬಳ್ಳಾಪುರ:ಗಾಳಿ ಮಳೆಗೆ ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ನಾಶವಾಗಿರುವುದರ ನಡುವೆ ಕೃಷಿ ಬೆಳೆಗಳು ಹಾಳಾಗಿವೆ.ಇದರಿಂದ ರೈತರು ನಷ್ಟ ಅನುಭವಿಸಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆಎಂದು ಅಳಲು ತೋಡಿಕೊಂಡಿದ್ದಾರೆ.

ಚಿಂತಾಮಣಿ ತಾಲೂಕಿನಗಡದಾಸನಹಳ್ಳಿಯ ಎಂ.ತಟ್ಟೆಗೌಡರು ಬ್ರಾಹ್ಮಣ ದಿನ್ನೆಯಲ್ಲಿ ಸರ್ವೇ ನಂ ೫೫ ಮತ್ತು ೫೬ ರಲ್ಲಿ ಸುಮಾರು . ಎಕರೆಯಲ್ಲಿ ಬಾಳೆ ಬೆಳೆಯನ್ನು ಬೆಳೆದಿದ್ದುಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತು ಬಿರುಗಾಳಿಗೆ ಇಡೀ ತೋಟ ನೆಲಸಮವಾಗಿದೆ. ೩೦ ಲಕ್ಷ ರೂ ನಷ್ಟ ಸಂಭವಿಸಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ತಟ್ಟೆಗೌಡ ಮನವಿ ಮಾಡಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ಕೆ.ಮತ್ತುಕದಹಳ್ಳಿ, ಕನ್ನಮಂಗಲ, ಚಿಂತಡಿಪಿ, ಆಲಸೂರು ದಿನ್ನೆ, ಗೊರಮಡುಗು, ಜಂಗಮಶೀಗೆಹಳ್ಳಿ ಸುತ್ತಲಿನಗ್ರಾಮಗಳಲ್ಲಿ ಬಿರುಗಾಳಿ ಮತ್ತು ಆಲಿಕಲ್ಲು ಮಳೆಯಿಂದ ತೋಟಗಾರಿಕೆ ಬೆಳೆಗಳು ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net