

ಚಿಕ್ಕಬಳ್ಳಾಪುರ: ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ೭ನೇರ್ಯಾಂಕ್ ಹಾಗೂ ಅಖಿಲ ಭಾರತದ ಹಂತದಲ್ಲಿ ೪೬೨ನೇ ರ್ಯಾಂಕ್‌ಡಾ.ಪಿ.ವರುಣ್ ಗೌಡರನ್ನು ಕರ್ನಾಟಕ ಕೆಂಪೇಗೌಡರ ಒಕ್ಕಲಿಗರ ಸಂಘ ಸನ್ಮಾನಿಸಿತು.
ಚಿಂತಾಮಣಿ ನಗರದ ರಾಜೀವನಗರ ಬಡಾವಣೆಯಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.
ಬಡ ರೈತ ಕುಟುಂಬದಲ್ಲಿ ಜನಿಸಿದ ಪ್ರಕಾಶಗೌಡರು ಮಗನಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಮೂಲಕ ರಾಜ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿರುವುದು ತುಂಬ ಹೆಮ್ಮೆಯ ವಿಷಯವಾಗಿದೆ ಎಂದು ಕರ್ನಾಟಕ ಕೆಂಪೇಗೌಡರ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಗೋಪಲ್ಲಿ ರಘುನಾಥರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು.