ವೆನೆಜುವೆಲಾ ಮೇಲೆ ಅಮೆರಿಕಾ ದಾಳಿ, ಬೀದಿಗಿಳಿದು ಕಿಡಿಕಾರಿದ ಸಂಘಟನೆಗಳು

ಚಿಕ್ಕಬಳ್ಳಾಪುರದಲ್ಲಿ ಕೈಗೊಂಡಿದ್ದ ಪ್ರತಿಭಟನೆಯಲ್ಲಿ ರಾಜ್ಯ ಸಿಪಿಐ(ಎಂ) ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ, ಜಿಲ್ಲಾ ಸಿಪಿಐ(ಎಂ) ಕಾರ್ಯದರ್ಶಿ ಜಿ.ಸಿದ್ದಗಂಗಪ್ಪ, ಸಮಿತಿ ಸದಸ್ಯರಾದ ಬಿ.ಎನ್.ಮುನಿಕೃಷ್ಣಪ್ಪ,  ಎಂ.ಎನ್.ರಘುರಾಮರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

Published on
ಇಲ್ಲಿನ ಅಂಬೇಡ್ಕರ್‌ ವೃತ್ತದಲ್ಲಿ ಧಿಕ್ಕಾರದ ಘೋಷಣೆಗಳನ್ನು ಕೂಗಿ ರಸ್ತೆ ತಡೆ ನಡೆಸಿದರು. ವೆನೆಜುವೆಲಾ ದೇಶದ ತೈಲ ಸಂಪತ್ತನ್ನು ಕೊಳ್ಳೆ ಹೊಡೆಯುವ ದುರುದ್ದೇಶದಿಂದ ಅಮೇರಿಕಾ ಮಿಲಿಟರಿ ದಾಳಿ ನಡೆಸಿದೆ. ಇದು ಒಂದು ಸಾರ್ವಭೌಮ ಸ್ವತಂತ್ರ ಹಾಗೂ ಚುನಾಯಿತ ಪ್ರಜಾಪ್ರಭುತ್ವ ರಾಷ್ಟ್ರದ ಮೇಲೆ ಹಿಂದೆಂದೂ ಕಂಡರಿಯದ ದೌರ್ಜನ್ಯವಾಗಿದೆ. ಹಿಂದೆ ಇರಾಕ್, ಲಿಬಿಯಾ ಸೇರಿದಂತೆ ಇತರೆ ದೇಶಗಳ ಮೇಲೆ ಆಕ್ರಮಣ ನಡೆಸಿ, ಅವುಗಳ ಅಧ್ಯಕ್ಷರನ್ನು ಕಗ್ಗೊಲೆ ಮಾಡಿದೆ ಎಂದುರಾಜ್ಯ ಸಿಪಿಐ(ಎಂ) ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಕೂಡಲೇ ಅಮೇರಿಕಾದ ಪುಂಡಾಟಿಕೆ ಯುದ್ಧದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಸಿಪಿಐ(ಎಂ) ಕಾರ್ಯದರ್ಶಿ ಜಿ.ಸಿದ್ದಗಂಗಪ್ಪ, ಸಮಿತಿ ಸದಸ್ಯರಾದ ಬಿ.ಎನ್.ಮುನಿಕೃಷ್ಣಪ್ಪ, ಎಂ.ಎನ್.ರಘುರಾಮರೆಡ್ಡಿ, ಹಳ್ಳಿ ಮಕ್ಕಳ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟರವಣಪ್ಪ, ಮುಖಂಡರಾದ ಡಿ.ಟಿ.ಮುನಿಸ್ವಾಮಿ, ಜಿ.ಮುಸ್ತಾಫ, ವಿ.ರವಿಕುಮಾರ್, ವಿಜಯ್ ಕುಮಾರ್ , ಯರ್ರಪ್ಪ, ಶಿವಪ್ಪ ಬಾಬು, ರಾಮಕೃಷ್ಣಪ್ಪ, ನರಸಿಂಹಯ್ಯ, ಸೋಮಶೇಖರ್ ಮತ್ತಿತರರು ವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net