ಪೊಲೀಸರನ್ನು ಎಳೆದಾಡಿ ನೆಲಕ್ಕೆ ಬೀಳಿಸಿ ನಿಂದಿಸಿದ ವಿದ್ಯಾರ್ಥಿಗಳು

ನಡು ರಸ್ತೆಯಲ್ಲಿ ಪೊಲೀಸ್‌ ಸಿಬ್ಬಂದಿ, ವಿದ್ಯಾರ್ಥಿಗಳ ನಡುವೆ ಗಲಾಟೆ
ನಡು ರಸ್ತೆಯಲ್ಲಿ ಪೊಲೀಸ್‌ ಸಿಬ್ಬಂದಿ, ವಿದ್ಯಾರ್ಥಿಗಳ ನಡುವೆ ಗಲಾಟೆ
Published on
ಚಿಕ್ಕಬಳ್ಳಾಪುರ: ಇಲ್ಲಿನ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ಮಾರಾಮರಿ ಗಲಾಟೆ ನಡೆದಿದ್ದು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಳ್ಳಲಾಗಿದೆ.
ನಾಗಾರ್ಜುನ ಕಾಲೇಜಿನಲ್ಲಿ ನಟ ಡಾಲಿ ಧನಂಜಯ ಭಾಗಿಯಾದ ಕಾರ್ಯಕ್ರಮ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನೆರೆದಿದ್ದರು. ಇದರ ನಡುವೆ ಪಹರೆಯಲ್ಲಿ ತೊಡಗಿದ್ದ ಪೊಲೀಸರು ಕಾಲೇಜಿನ ಬಳಿಗೆ ಬಂದಾಗ ಗಲಾಟೆ ನಡೆದಿದೆ.
ವಿದ್ಯಾರ್ಥಿಗಳು ಬೈಕ್ ಚಾಲನೆಯ ವೇಳೆ ಕರ್ಕಶ ಧ್ವನಿ ಹೊರ ಹೊಮ್ಮಿಸುತ್ತಿದ್ದ ವಿಚಾರವಾಗಿ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ.
ಸಭ್ಯ ರೀತಿಯಲ್ಲಿ ವರ್ತಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಸೌಂಡ್ ಮಾಡಬಾರದು ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದು ಪೊಲೀಸರು ವಿದ್ಯಾರ್ಥಿಗಳಿಗೆ ರಕ್ತ ಬರುವಂತೆ ಹೊಡೆದು ಬೈದಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿಗಳು ಸಿಬ್ಬಂದಿಯನ್ನು ಎಳೆದಾಡಿದ್ದಾರೆ. ನೆಲಕ್ಕೆ ಬೀಳಿಸಿ ಹಲ್ಲೆ ಮಾಡಿದ್ದಾರೆ. ಇಬ್ಬರನ್ನು ಸಮಾಧಾನಪಡಿಸುವಷ್ಟರಲ್ಲಿ ಸ್ಥಳೀಯರು ಹೈರಾಣರಾಗಿದ್ದಾರೆ. ಕೊನೆಗೆ ಎರಡು ಕಡೆಯವರನ್ನು ಬೇರೆಡೆ ಕರೆದುಕೊಂಡು ಹೋಗಿ ತಿಳಿಗೊಳಿಸಲಾಗಿದೆ. ಇನ್ನೂ ಹಲ್ಲೆಗೊಳಗಾದ ಸಿಬ್ಬಂದಿ ಠಾಣೆಯಲ್ಲಿ ಕರ್ತವ್ಯ ನಿರ್ವಹಣೆಗೆ ಅಡ್ಡಿ, ಹಲ್ಲೆ, ಮಾತಿನ ಚಕಮಕಿ ಸೇರಿದಂತೆ ದೂರು ಸಲ್ಲಿಸಿದ್ದಾರೆ. ಮತ್ತೊಂದೆಡೆ ಪೊಲೀಸರು ದಬ್ಬಾಳಿಕೆ ನಡೆಸಿ, ನಿಂದಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net