

ಚಿಕ್ಕಬಳ್ಳಾಪುರ: ರಾಷ್ಟ್ರ ಮಟ್ಟದ ಬದಲಿಗೆ ರಾಜ್ಯರಾಜಕಾರಣದಲ್ಲಿಯೇ ಉಳಿಯುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನಿರ್ಧಾರ ಗಂಭೀರವಾಗಿ ಯೋಚಿಸಬೇಕಾದ ವಿಚಾರ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ವಿಶ್ಲೇಷಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿಕೆಯೊಂದಿಗೆ ರಾಜ್ಯ ಸರ್ಕಾರದಲ್ಲಿ ಸಿದ್ದರಾಮಯ್ಯ ಅನುಪಸ್ಥಿತಿಯಭಾವನೆಯು ಖಂಡಿತವಾಗಿ ಕಾಣಲಿದೆ. ಏನೇ ಭಿನ್ನಾಭಿಪ್ರಾಯಗಳು ಇದ್ದರೂ ಸಹ ಅವರು ಸಾಮಾಜಿಕ ನ್ಯಾಯ, ಸಮಾನತೆಗೆ, ಸಾಮಾನ್ಯ ಜನರಿಗೆ ಸವಲತ್ತುಗಳನ್ನುಒದಗಿಸುವ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆಎನ್ನುವುದರಲ್ಲಿ ಎರಡು ಮಾತಿಲ್ಲ. ಅವರಮತ್ತಷ್ಟು ಸೇವೆ ರಾಜ್ಯಕ್ಕೆ ಅಗತ್ಯವಿದೆ. ಇದರ ನಡುವೆ ರಾಷ್ಟ್ರ ರಾಜಕಾರಣದ ಅವಕಾಶ ಸಿಕ್ಕಿದರೂಸಹ ರಾಜ್ಯ ರಾಜಕಾರಣದಲ್ಲೇ ಉಳಿಯುತ್ತಿರುವುದುಡಿ.ಕೆ.ಶಿವಕುಮಾರ್ ಗೆಎಚ್ಚರಿಕೆಯ ಗಂಟೆಯಾಗಿದೆ. ಸಿದ್ದರಾಮಯ್ಯನವರು ಸುಮ್ಮನೆ ಕೂರುವವರಲ್ಲ. ಭಿನ್ನಾಭಿಪ್ರಾಯವಿರುವ ಶಾಸಕರು ಅಭಿಯಾನಪರೇಡ್ ಮಾಡಿದರೆ ಅದರ ಕೇಂದ್ರವಾಗುತ್ತಾರೆಎಂದಿದ್ದಾರೆ.
ಡಿ.ಕೆ.ಶಿವಕುಮಾರ್ ಪ್ರಬಲಹೋರಾಟ, ಸಂಘಟನೆಯ ಮೂಲಕ ಈಗ ಸಿಎಂ ಸ್ಥಾನವನ್ನು ದಕ್ಕಿಸಿಕೊಳ್ಳುತ್ತಿದ್ದಾರೆ.ಜವಾಬ್ದಾರಿಯಿಂದ ಕೆಲಸ ಮಾಡಲಿ, ರಾಜ್ಯಕ್ಕೆ ಒಳ್ಳೆಯದಾಗಲಿಎಂದಿದ್ದಾರೆ.
ಸರ್ಕಾರದಲ್ಲಿ ಹೊಸ ತಂಡ ಕಟ್ಟಿಕೊಳ್ಳಲು ಡಿ.ಕೆ.ಶಿವಕುಮಾರ್ಗೆ ಹೈಕಮಾಂಡ್ ಎಷ್ಟು ಅವಕಾಶ ನೀಡಲಿದೆ? ಎನ್ನುವುದನ್ನುಕಾದು ನೋಡಬೇಕಿದೆ. ಕಾಂಗ್ರೆಸ್ನಲ್ಲಿಹೈಕಮಾಂಡ್, ಜಾತಿ ಎಂಬಂತೆ ಮೂರು ನಾಲ್ಕು ಕ್ಯಾಂಪ್ಗಳು ಇರುತ್ತವೆ. ಇವೆಲ್ಲ ಸವಾಲುಗಳನ್ನು ಮೀರಿ ಅವರು ಆಡಳಿತ ನಡೆಸಬೇಕಿದೆ.ಪ್ರಸ್ತುತ ರಚನೆಯಾಗಲಿರುವ ಸರ್ಕಾರವನ್ನು ಯಾರೂ ಟೀಕಿಸುವಅವಶ್ಯಕತೆ ಇಲ್ಲ. ಆರು ತಿಂಗಳ ಬಳಿಕ ಆಡಳಿತದ ವೈಖರಿಯನ್ನು ವಿಶ್ಲೇಷಿಸಬಹುದಾಗಿದೆಎಂದಿದ್ದಾರೆ.