ಆರ್‌ ಎಸ್‌ ಎಸ್‌, ಬಿಜೆಪಿಗರು ಸಂವಿಧಾನವಾದಿಗಳಲ್ಲ, ಮನುವಾದಿಗಳು

ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿದರು.
ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿದರು.
Published on

ಚಿಕ್ಕಬಳ್ಳಾಪುರ: ಆರ್ಎಸ್ಎಸ್ಹಾಗೂ ಬಿಜೆಪಿಯವರು ಪಕ್ಕಾ ಮನುವಾದಿಗಳು, ಎಂದಿಗೂ ಸಂವಿಧಾನ ವಾದಿಗಳಲ್ಲ. ಶೂದ್ರರು, ಮಹಿಳೆಯರನ್ನು ಕಂಡರೆ ಆಗುವುದಿಲ್ಲ. ಸದಾ ಎರಡನೇ ದರ್ಜೆಯವರನ್ನಾಗಿ ಕಾಣುತ್ತಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಕಿಡಿಕಾರಿದ್ದಾರೆ.

ಹಿಂದೆಯೇ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಬಿಲ್ಗೆ ಬಹುಮತದೊಂದಿಗೆ ಅನುಮೋದನೆ ಸಿಕ್ಕಿದೆ. ಆದರೂ ಸಹ ತಮಿಳುನಾಡಿನ ಚುನಾವಣಾ ಲಾಭದ ದೃಷ್ಟಿಯಲ್ಲಿ ಮತ್ತೆ ಬಿಲ್ಪಾಸ್ಪ್ರಕ್ರಿಯೆಯ ಹುನ್ನಾರ ನಡೆಸಲಾಯಿತು. ಆದರೆ, ಕ್ಷೇತ್ರ ಮರು ವಿಂಗಡಣೆಯ ಹೆಸರಿನಲ್ಲಿ ಕೇವಲ ಉತ್ತರ ಭಾರತಕ್ಕೆ ಲಾಭ ಮಾಡಿಕೊಡಲು ದಕ್ಷಿಣ ಭಾರತಕ್ಕೆ ಅನ್ಯಾಯವೆಸಗಲು ಮುಂದಾಗಿದ್ದಲ್ಲಿ ಕಾಂಗ್ರೆಸ್ಸುಮ್ಮನಿರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಗೆ ದಕ್ಷಿಣ ಭಾರತದ ಎಲ್ಲರೂ ಸೇರಿ ಪಾಠ ಕಲಿಸುತ್ತಾರೆ ಎಂದು ಚಿಕ್ಕಬಳ್ಳಾಪುರದಲ್ಲಿ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿನ ಸಂಸದರು, ಸಚಿವರು, ಶಾಸಕರು ಎಲ್ಲಿ ಇದ್ದಾರೆ. ಪರಿಶಿಷ್ಟ ವರ್ಗದ ಜನರು ಚುನಾವಣೆಯಲ್ಲಿ ಗೆಲ್ಲಿಸಿ ಕಳುಹಿಸಿಲ್ಲವೇ?. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ಈಶ್ವರ್‌, ಸಂಸದರಾದ ನಿರ್ಮಲ ಸೀತರಾಮನ್‌, ಶೋಭಾ ಕರಂದ್ಲಾಜೆ, ಡಾ ಕೆ.ಸುಧಾಕರ್‌, ಬಸವರಾಜ ಬೊಮ್ಮಾಯಿ ಶೋಷಿತರ ಪರವಾಗಿ ಧ್ವನಿ ಎತ್ತಬೇಕು. ಸಾಮಾಜಿಕ ನ್ಯಾಯ, ಸಂವಿಧಾನ ಬದ್ಧತೆ ಹೊಂದಿದ್ದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಮೀಸಲಾತಿ ಹಾಗೂ ಸವಲತ್ತುಗಳ ಮೂಲಕ ಪರಿಶಿಷ್ಟರಿಗೆ ರಾಜಕೀಯ, ಸಾಮಾಜಿಕ ನ್ಯಾಯ ಒದಗಿಸಬೇಕು. ನಿಟ್ಟಿನಲ್ಲಿ ಎಲ್ಲ ಜನಪ್ರತಿನಿಧಿಗಳು ಒತ್ತಡ ಹೇರಲು ಮುಂದಾಗಬೇಕು. ಒಂದು ವೇಳೆ ಬಾಯಿ ಬಿಡದೇ ಅಸಡ್ಡೆ ತೋರಿದ್ದಲ್ಲಿ ಪಕ್ಷ ಭೇದ ಮರೆತು ಮುಂಬರುವ ಚುನಾವಣೆಯಲ್ಲಿ ಪಾಠ ಕಲಿಸಬೇಕಾಗುತ್ತದೆ ಎಂದು ಉಗ್ರಪ್ಪ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net