ಜ.೧೪ ರಂದು ರಾಜೀವ್‌ಗೌಡ ವಿರುದ್ಧ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಪೌರಾಯುಕ್ತೆಗೆ ಬೆದರಿಕೆಯನ್ನೊಡ್ಡಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಇದರ ನಡುವೆ ನಾಪತ್ತೆಯಾಗಿದ್ದ ಆರೋಪಿ ಕೇರಳದಲ್ಲಿ ಪತ್ತೆಯಾಗಿದ್ದು ಚಿಂತಾಮಣಿ ಜೈಲಿನಲ್ಲಿಡಲಾಗಿತ್ತು. ಈಗ ನ್ಯಾಯಾಲಯವು ಜಾಮೀನು ನೀಡಿದೆ. ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರು ರಾಜೀವ್‌ಗೌಡ ಪರ ವಕಾಲತ್ತು ವಹಿಸಿದ್ದರು.