

ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿ ಮುಂಗಾರು ಪೂರ್ವ ವಾಡಿಕೆ ಮಳೆಗಿಂತಲೂ ಹೆಚ್ಚುವರಿ ಮಳೆಯಾಗಿದ್ದು ಸುಡು ಬೇಸಿಗೆಅವಧಿಯಲ್ಲೂ ವರುಣರಾಯನ ಆರ್ಭಟಿಸಿದ್ದಾನೆ.
ಮೇ.೬ ರ ಬೆಳಿಗ್ಗೆ ೮.೩೦ರಿಂದ ಮೇ.೭ ರ ಬೆಳಿಗ್ಗೆ ೭.೩೦ ರವರೆಗೆ ಚಿಕ್ಕಬಳ್ಳಾಪುರ, ಬಾಗೇಪಲ್ಲಿ ವ್ಯಾಪ್ತಿಯಲ್ಲಿ ೩೦.೫ಮಿ.ಮೀ ಮಳೆಯಾಗಿದೆ. ಇನ್ನು ಇತ್ತೀಚಿಗಿನ ದಿನಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ಮೋಡ ಮುಸುಕಿದವಾತಾವರಣ ಕಂಡು ಬರುತ್ತಿದ್ದು ಅಲ್ಲಲ್ಲಿ ತುಂತುರು ಹನಿಗಳ ಸಿಂಚನವಾಗಿದೆ.
ಇನ್ನು ಬೇಸಿಗೆಯ ಅವಧಿಯಲ್ಲಿಸಾಧಾರಣ ಪ್ರಮಾಣದ ವಾಡಿಕೆ ಮಳೆಯ ನಿರೀಕ್ಷೆ ಹೊಂದಲಾಗಿದೆ. ಜನವರಿ-ಫೆಬ್ರವರಿ: ೧.೭(೫.೯)ಮಳೆಯಾಗಿ ಶೇ.೭೧ ರಷ್ಟು ಕೊರತೆಯಾಗಿದೆ. ಉಳಿದಂತೆ ಮಾರ್ಚ್ ನಲ್ಲಿ ಶೇ.೧೩೬ ರಷ್ಟು, ಏಪ್ರಿಲ್‌ನಿಂದ ಇಲ್ಲಿಯವರೆಗೆ ಶೇ.೧೪೭ ರಷ್ಟು ಹೆಚ್ಚುವರಿ ಮಳೆಯಾಗಿದೆ.
ಈಭಾಗದಲ್ಲಿ ಸರಾಸರಿ ಕನಿಷ್ಠ 26 ಡಿಗ್ರಿ ಸೆಲ್ಸಿಯಸ್ ನಿಂದ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇತ್ತು.ಹೆಚ್ಚಿನ ತಾಪಮಾನದ ಬಿಸಿಲಿನ ಬೇಗೆಗೆ ಜನ ಹೈರಾಣರಾಗಿದ್ದರು.ತಂಪು ಪಾನೀಯಾ ಹಾಗೂ ತಂಪು ಆಹಾರ ಪದಾರ್ಥಗಳ ಸೇವನೆಯ ಮೂಲಕದಾಹವನ್ನು ನೀಗಿಸಿಕೊಳ್ಳಲು ಯತ್ನಿಸಿದ್ದುತುಂಬಾ ಸೆಕೆ ಕಾಡಿದ ಹಿನ್ನೆಲೆಯಲ್ಲಿ ಹವಾ ನಿಯಂತ್ರಕಗಳ ಬಳಕೆ ಹೆಚ್ಚಾಗಿತ್ತು.ಇದರ ನಡುವೆ ಏಪ್ರಿಲ್ ಅಂತ್ಯ ಹಾಗೂ ಮೇ ಪ್ರಾರಂಭದಲ್ಲಿ ವಿವಿಧೆಡೆ ವರುಣರಾಯನ ಸಿಂಚನವಾಗಿದೆ.ಇನ್ನು ಮಧ್ಯಾಹ್ನ ಸುಡು ಬಿಸಿಲು, ಬೆಳಿಗ್ಗೆ ಹಾಗೂ ಸಂಜೆ ಕೂಲ್ ಆಗಿರುವ ಏರುಪೇರು ವಾತಾವರಣಕಂಡು ಬರುತ್ತಿದೆ.