ಶಾಸಕರ ಸಂಬಂಧಿ ಮನೆಗೆ ಅಡ್ಡಿ, ಕ್ರೀಡಾಂಗಣದಲ್ಲಿನ ಮರ ಕಡಿಯಲು ಯತ್ನ

ಕ್ರೀಡಾಂಗಣದಲ್ಲಿ ಕಡಿಯಲು ಉದ್ದೇಶಿಸಿರುವ ಮರಗಳ ಮುಂಭಾಗ ಕ್ರೀಡಾಪಟುಗಳ ಆಕ್ರೋಶ
ಕ್ರೀಡಾಂಗಣದಲ್ಲಿ ಕಡಿಯಲು ಉದ್ದೇಶಿಸಿರುವ ಮರಗಳ ಮುಂಭಾಗ ಕ್ರೀಡಾಪಟುಗಳ ಆಕ್ರೋಶ
Published on

ಚಿಕ್ಕಬಳ್ಳಾಪುರ

:

ಸ್ಥಳೀಯಶಾಸಕ ಪ್ರದೀಪ್‌ ಈಶ್ವರ್‌ ಸಂಬಂಧಿಗೆ ಸೇರಿದ ಮನೆಯ ಕಟ್ಟಡಕ್ಕೆ ಅಡ್ಡಲಾಗಿ ಇವೆ ಎಂಬಲೆಕ್ಕಾಚಾರದಲ್ಲಿ ಸರ್‌‌ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿನ ಮರಗಳನ್ನು ಕಡಿಯುವ ನಿಟ್ಟಿನಲ್ಲಿಮುಂದಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಹಲವು ವರ್ಷಗಳಿಂದಲೂ ಇರುವ ಮರಗಳನ್ನು ಕಡಿಯುವ ಸಲುವಾಗಿಇತ್ತೀಚೆಗೆ

ಗುರುತು ಮಾಡಲಾಗಿದೆ. ಇದರ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಸ್ಥಳೀಯ ಕ್ರೀಡಾಪಟುಗಳು, ವಾಯು ವಿಹಾರಿಗಳು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಸ್ಥಳೀಯಜನಪ್ರತಿನಿಧಿ ಹಾಗೂ ಅಧಿಕಾರಿಗಳ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂಮರಗಳನ್ನು ಕಡಿಯಲು ಅವಕಾಶ ನೀಡುವುದಿಲ್ಲ. ಒಂದು ವೇಳೆ ಜನ ವಿರೋಧದ ನಡುವೆಯೂ ಪ್ರಕ್ರಿಯೆಕೈಗೊಂಡರೆ ತೀವ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಾಸಕರು ಅಧಿಕಾರವನ್ನು ಜನರ ಒಳಿತಿಗಾಗಿ ಬಳಸಬೇಕೇ ಹೊರತುದುರುಪಯೋಗಪಡಿಸಿಕೊಳ್ಳಬಾರದು. ಸಹೋದರನ ಮನೆಗೆ ಮರಗಳು ಅಡ್ಡಲಾಗಿ ಇವೆ ಎಂಬ ದುರುದ್ದೇಶದಿಂದಇಲಾಖೆಗೆ ತೆರವುಗೊಳಿಸಲು ಮುಂದಾಗಿರುವುದು ಸರಿಯಲ್ಲ ಎಂದು ಬೇಸರಿಸಿದ್ದಾರೆ.

ಈ ಸಂದರ್ಭದಲ್ಲಿ ನಗರಸಭಾ ಮಾಜಿ ಸದಸ್ಯ ಮಿಲ್ಟನ್‌ ವೆಂಕಟೇಶ್‌,ಕ್ರೀಡಾಪಟು ಅರ್ಜುನ್‌ ಅಡಿಗ, ವಾಯು ವಿಹಾರಿ ಜೆಸಿಬಿ ಮಂಜುನಾಥ್‌ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net