ಅಧಿಕೃತವಾಗಿ ಸಿಎಂ ನಿವಾಸ ಗುರುತಿಸಲು ಸಂಸದ ಡಾ ಕೆ.ಸೂಧಾಕರ್ ಸಲಹೆ

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಕೈಗೊಂಡಿದ್ದ ಕಾರ್ಯಕ್ರಮವನ್ನು ಸಂಸದ ಡಾ ಕೆ.ಸುಧಾಕರ್‌ ಉದ್ಘಾಟಿಸಿದರು.,
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಕೈಗೊಂಡಿದ್ದ ಕಾರ್ಯಕ್ರಮವನ್ನು ಸಂಸದ ಡಾ ಕೆ.ಸುಧಾಕರ್‌ ಉದ್ಘಾಟಿಸಿದರು.,
Published on

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಸಿಎಂ ಅಧಿಕೃತ ನಿವಾಸವನ್ನು ಅಧಿಕೃತವಾಗಿ ಗುರುತಿಸಿ,ಸಚಿವ ಸಂಪುಟದಲ್ಲಿ ಅನುಮೋದಿಸಲು ಸಂಸದ ಡಾ ಕೆ.ಸುಧಾಕರ್ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಯವರ ಅಧಿಕೃತ ನಿವಾಸದಲ್ಲೇ ಸಿಎಂಇರಬೇಕು. ಕಾವೇರಿ ನಿವಾಸವನ್ನು ಅಧಿಕೃತವೋ?ಇಲ್ಲವೋ ಎನ್ನುವುದು ತಿಳಿದಿಲ್ಲ. ಆದರೆ, ಮುಖ್ಯಮಂತ್ರಿಗೆ ನಿಗದಿತ ನಿವಾಸನಿಗದಿಪಡಿಸಬೇಕು ಎಂದು ಚಿಕ್ಕಬಳ್ಳಾಪುರ ನಗರದಲ್ಲಿನ ಸ್ವಗೃಹ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

ಹಿಂದೆ ಬಿ.ಎಸ್‌.ಯಡಿಯೂರಪ್ಪ, ಎಚ್‌.ಡಿ.ದೇವೇಗೌಡ, ಜೆ.ಎಚ್‌.ಪಟೇಲ್ಸೇರಿದಂತೆಅನೇಕ ಮುಖ್ಯಮಂತ್ರಿಗಳು ಬೇರೆ ಬೇರೆ ಕಡೆ ಇದ್ದರು. ಇದರನಡುವೆ ಹಿಂದೆ ಕಾವೇರಿ ನಿವಾಸಕ್ಕೆಎಚ್‌.ಡಿ.ಕುಮಾರಸ್ವಾಮಿ ಅಲ್ಲಿಗೆಹೋಗಿಲ್ಲ ಎಂಬುದಾಗಿ ಕೆಲವರು ಹೇಳುತ್ತಿರುವುದು ತಪ್ಪು. ಆ ನಿವಾಸದಲ್ಲಿ ಬೇರೆಯವರು ವಾಸವಿದ್ದಾಗಹೇಗೆ ಹೋಗಿ ಇರಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ದೆಹಲಿಯಲ್ಲಿ ಪ್ರಧಾನಿ ನಿವಾಸದಲ್ಲಿಮಾತ್ರವೇ ಪ್ರಧಾನಿ ಮಾತ್ರ ಇರುತ್ತಾರೆ. ಡಾ.ಮನಮೋಹನ್ಸಿಂಗ್‌10 ವರ್ಷ ಅಧಿಕಾರ ಮುಗಿದ ಕೂಡಲೇ ಅಲ್ಲಿಂದ ತೆರಳಿದ್ದರು. ಹಾಗೆಯೇರಾಜ್ಯದಲ್ಲಿ ಸಿಎಂ ಅಧಿಕೃತ ನಿವಾಸವನ್ನು ಅನುಮೋದಿಸಲು ಸಿಎಂ ಡಿ.ಕೆ.ಶಿವಕುಮಾರ್ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net