ಮಳೆಯ ಅಭಾವ, ಪರ್ಯಾಯ ಬೆಳೆಗಳಿಗೆ ಆದ್ಯತೆ ನೀಡುವ ತಂತ್ರಗಾರಿಕೆ

ಕೃಷಿ ಜಮೀನಿನಲ್ಲಿ ರೈತರೊಂದಿಗೆ ಉಪ ಮುಖ್ಯಮಂತ್ರಿ ಡಾ ಜಿ.ಪರಮೇಶ್ವರ್‌ ರೈತರಿಗೆ ಚರ್ಚಿಸುತ್ತಿರುವುದು.
ಕೃಷಿ ಜಮೀನಿನಲ್ಲಿ ರೈತರೊಂದಿಗೆ ಉಪ ಮುಖ್ಯಮಂತ್ರಿ ಡಾ ಜಿ.ಪರಮೇಶ್ವರ್‌ ರೈತರಿಗೆ ಚರ್ಚಿಸುತ್ತಿರುವುದು.
Published on

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿಮಳೆಯ ಅಭಾವದ ಹಿನ್ನೆಲೆಯಲ್ಲಿ ಮುಂಗಾರು ಅವಧಿಯಲ್ಲಿ ಬಿತ್ತನೆ ಪ್ರಮಾಣ ಕುಂಠಿತಗೊಂಡಿದ್ದು ಪರ್ಯಾಯಬೆಳೆಗಳನ್ನು ಬೆಳೆಯುವ ನಿಟ್ಟಿನಲ್ಲಿ ಬಿತ್ತನೆಗೆ ಹೈಬ್ರೀಡ್‌ ತಳಿಗಳ ಆವಲಂಬನೆಅನಿರ್ವಾಯವಾಗಿದೆ.

ಪ್ರಸ್ತುತ ಇಲ್ಲಿಯವರೆಗೂ ಶೇ.೭ ರಷ್ಟು ಮಾತ್ರ ಬಿತ್ತನೆ ಸಾಧನೆಕಂಡು ಬಂದಿದೆ. ೧,೨೬,೮೫೪ ಹೆಕ್ಟೇರ್‌ ಪ್ರದೇಶದಲ್ಲಿ ೪೦೬೬ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರಬಿತ್ತನೆಯಾಗಿದೆ. ಇದಕ್ಕೆ ಕಾರಣ ಮಳೆಯ ಅಭಾವ. ರೈತರು ಭೂ ಹದ ಕಾರ್ಯ ಕೈಗೊಂಡು ಕೃಷಿ ಜಮೀನನ್ನುಖಾಲಿ ಬಿಟ್ಟು ವರುಣರಾಯನಿಗೆ ಎದುರು ನೋಡುವಂತಾಗಿದೆ.

ಮುಂಗಾರು ಅವಧಿಯಲ್ಲಿ ಸಾಮಾನ್ಯವಾಗಿ ಜೂನ್‌ ಮೊದಲ ವಾರದಲ್ಲಿಬಿತ್ತನೆ ಚಟುವಟಿಕೆ ಪ್ರಾರಂಭವಾಗುತ್ತದೆ. ಆದರೆ, ಈ ಬಾರಿ ಜುಲೈ ಅಂತ್ಯಕ್ಕೆ ಸನಿಹ ಬಂದರೂ ಸಹವಾಡಿಕೆ ಪ್ರಮಾಣಕ್ಕೆ ಅನುಗುಣವಾಗಿ ಮಳೆಯಾಗಿಲ್ಲ. ಕಳೆದ ೨೫ ದಿನಗಳಲ್ಲಿ ಶೇ.೮೬ ರಷ್ಟು ಕೊರತೆಕಂಡು ಬಂದಿದೆ. ಜುಲೈನಲ್ಲಿ ೫೦.೯ ಮಿ.ಮೀ ವಾಡಿಕೆ ಮಳೆಗೆ ಕೇವಲ ೬.೯ ಮಿ.ಮೀ ಮಳೆ ಬಿದ್ದಿದೆ.

ಜಿಲ್ಲೆಯಲ್ಲಿ ೧೬೧೬೩೧ ಹೆಕ್ಟೇರ್‌ ಪ್ರದೇಶ ಸಾಗುವಳಿ ವಿಸ್ತೀರ್ಣಹೊಂದಿದ್ದು ೨,೩೨,೮೧೭ ರೈತರಿದ್ದಾರೆ. ಮುಂಬರುವ ದಿನಗಳಲ್ಲಿ ಕೃಷಿ ಚಟುವಟಿಕೆ ಬಿರುಸುಗೊಳ್ಳಲುನಿರೀಕ್ಷೆಗೆ ಅನುಗುಣವಾಗಿ ಮಳೆ ಬೀಳಬೇಕಾಗಿದೆ. ಇನ್ನು ನೆಲಗಡಲೆ, ತೊಗರಿ ಬಿತ್ತನೆ ಅವಧಿಯುಮುಕ್ತಾಯಗೊಂಡಿರುವುದರಿಂದ ಜಿಲ್ಲೆಯಲ್ಲಿ ರಾಗಿ, ಮುಸುಕಿನ ಜೋಳ, ಸಿರಿಧಾನ್ಯಗಳು,ಎಣ್ಣೆಕಾಳುಗಳನ್ನು ಬೆಳೆಯಲು ಆದ್ಯತೆ ನೀಡಲಾಗುತ್ತಿದೆ. ಅದರಲ್ಲೂ ಹೈಬ್ರೀಡ್‌ ತಳಿಯ ಬಿತ್ತನೆಬೀಜಗಳನ್ನು ಬಳಸಲು ಯೋಜಿಸಲಾಗಿದೆ. ಇದಕ್ಕೆ ನಿಗದಿತ ಅವಧಿಯಲ್ಲಿ ಮಳೆ ಹಾಗೂ ಮಣ್ಣಿನ ತೇವಾಂಶಕ್ಕೆಅನುಗುಣವಾಗಿ ಹಂಚಿಕೆಗೆ ಕೃಷಿ ಇಲಾಖೆಯು ಕ್ರಮ ಕೈಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net