ಚಿಕ್ಕಬಳ್ಳಾಪುರದ ಬಡ ವಿದ್ಯಾರ್ಥಿಗಳಿಗೆ ಕೆಪಿಎಸ್ಸಿ ಉಚಿತ ಕೋಚಿಂಗ್‌

ಚಿಕ್ಕಬಳ್ಳಾಪುರದಲ್ಲಿ ಕೈಗೊಂಡಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಶಾಸಕ ಪ್ರದೀಪ್‌ ಈಶ್ವರ್.
ಚಿಕ್ಕಬಳ್ಳಾಪುರದಲ್ಲಿ ಕೈಗೊಂಡಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಶಾಸಕ ಪ್ರದೀಪ್‌ ಈಶ್ವರ್.
Published on

ಚಿಕ್ಕಬಳ್ಳಾಪುರ: ಬಡ ವಿದ್ಯಾರ್ಥಿಗಳು ಸಹ ಕರ್ನಾಟಕ ಲೋಕಸೇವಾಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವುದರೊಂದಿಗೆ ಉನ್ನತಹುದ್ದೇಗೇರಬೇಕೆಂಬ ಉದ್ದೇಶದೊಂದಿಗೆ ಶಾಸಕ ಪ್ರದೀಪ್‌ ಈಶ್ವರ್‌ ಅಯ್ಯರ್‌ ನೇತೃತ್ವದ ಪರಿಶ್ರಮನೀಟ್‌ ಅಕಾಡೆಮಿಯು ಉಚಿತ ತರಬೇತಿ ಕಾರ್ಯಾಗಾರ ಕೈಗೊಂಡಿದೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗುವುದು, ಅಧ್ಯಯನ ಕೌಶಲ,ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ವೃದ್ಧಿ ಸೇರಿದಂತೆ ವಿವಿಧ ತಂತ್ರಗಾರಿಕೆಯಬಗ್ಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಶಾಸಕರು ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಯವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕಾರ್ಯ ಚಟುವಟಿಕೆ ಕೈಗೊಂಡಿದ್ದಾರೆ. ಪ್ರತಿ ಭಾನುವಾರ ನುರಿತತಜ್ಞರು ತರಗತಿಗಳನ್ನು ನಡೆಸಿಕೊಡಲಿದ್ದು ಇದಕ್ಕೆ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಚಾಲನೆ ನೀಡಲಾಗಿದೆ. ಮೊದಲ ದಿನದ ಕಾರ್ಯಾಗಾರಕ್ಕೆ ೨೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೆಸರುನೋಂದಾಯಿಸಿಕೊಂಡಿದ್ದು ಮುಂಬರುವ ದಿನಗಳಲ್ಲಿ ನೋಂದಾಯಿತರ ಸಂಖ್ಯೆ ಏರಿಕೆಯಾಗುವ ನಿರೀಕ್ಷೆಯನ್ನುಹೊಂದಲಾಗಿದೆ.

ನೋಂದಾಯಿತ ವಿದ್ಯಾರ್ಥಿಗಳಿಗೆ ಪರಿಶ್ರಮ ನೀಟ್‌ ಅಕಾಡೆಮಿಯಿಂದಅಧ್ಯಯನ ಸಾಮಗ್ರಿಗಳನ್ನು ನೀಡುತ್ತಿದ್ದು ಬಿಜಾಪುರ, ಧಾರವಾಡ, ಬೆಂಗಳೂರು ಸೇರಿದಂತೆ ರಾಜ್ಯದವಿವಿಧ ಭಾಗಗಳ ಕೆಪಿಎಸ್ಸಿ ಹಾಗೂ ಯುಪಿಎಸ್‌ಸಿ ತರಬೇತಿದಾರರಿಂದ ಪ್ರತಿ ಭಾನುವಾರ ತರಬೇತಿಸಿಗಲಿದೆ ಎಂದು ಶಾಸಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net