ಜನಿವಾರ ವಿವಾದ, ಕಟ್ಟುನಿಟ್ಟಿನ ಸೂಚನೆಯ ಅರಿವಿಲ್ಲದ ಸಿಬ್ಬಂದಿ

ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ.ಸುಧಾಕರ್
ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ.ಸುಧಾಕರ್
Published on

ಚಿಕ್ಕಬಳ್ಳಾಪುರ: ಪರೀಕ್ಷಾ ಪ್ರಾಧಿಕಾರವುನಿಯಮಾವಳಿಗಳ ಬಗ್ಗೆಕಟ್ಟು ನಿಟ್ಟಿನಸೂಚನೆ ನೀಡಿದೆ.ಇದರ ನಡುವೆಯೂಮಾಹಿತಿ ಕೊರತೆಯಲ್ಲಿಸಿಬ್ಬಂದಿ ಕೆಲವೆಡೆವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದಾರೆ.ಇದರ ವಿರುದ್ಧನಿಯಮಾನುಸಾರ ಕ್ರಮಕೈಗೊಳ್ಳಲಾಗುತ್ತದೆ ಎಂದುಉನ್ನತ ಶಿಕ್ಷಣಸಚಿವ ಡಾಎಂ.ಸಿ.ಸುಧಾಕರ್ತಿಳಿಸಿದ್ದಾರೆ.
ಪರೀಕ್ಷಾ ಅಭ್ಯರ್ಥಿಗಳಜನಿವಾರ ತೆಗೆಸುವಅವಶ್ಯಕತೆ ಇರಲಿಲ್ಲ.ಹಿಂದೆ ಪ್ರಕರಣಗಳುವರದಿಯಾದ ಹಿನ್ನೆಲೆಯಲ್ಲಿಎಚ್ಚೆತ್ತುಕೊಂಡು ಸಂಬಂಧಪಟ್ಟಸಿಬ್ಬಂದಿಗೆ ಮೊದಲೇಎಚ್ಚರಿಕೆ ನೀಡಲಾಗಿತ್ತು.ಆದರೂ ಪ್ರಕರಣಮರುಕಳಿಸಿದೆ. ಇದುದುರದೃಷ್ಟಕರ. ಯಾರಿಗೂಜನಿವಾರ ತೆಗೆಸಲುಹೇಳಿರಲಿಲ್ಲ. ಆದರೂಕೆಲ ಕಾಲೇಜುಗಳಲ್ಲಿಸಿಬ್ಬಂದಿ ಬಲವಂತದಿಂದತೆಗೆಸಿದ್ದಾರೆ ಎಂದುತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿಜನಿವಾರ ತೆಗೆಸಿದಪ್ರಕರಣಗಳು ಬೆಂಗಳೂರು, ಚಿಕ್ಕಬಳ್ಳಾಪುರದಲ್ಲಿ ವರದಿಯಾಗಿದೆ. ಆದರೆ,ಚಿಕ್ಕಬಳ್ಳಾಪುರದಲ್ಲಿ ವಿದ್ಯಾರ್ಥಿಹಾಗೂ ಆತನಪಾಲಕರು ದೂರುಕೊಟ್ಟಿಲ್ಲ. ಆದರೂಪ್ರಕರಣದ ತನಿಖೆನಡೆಸಲಾಗುತ್ತಿದೆ ಎಂದುತಿಳಿಸಿದ್ದಾರೆ. ಜನಿವಾರತೆಗೆಸಿರುವ ವಿಚಾರವಾಗಿದೊಡ್ಡ ಚರ್ಚೆನಡೆಯುತ್ತಿದೆ. ಆದರೆ,ಕೇಂದ್ರ ಸರ್ಕಾರದಅಧೀನ ಪ್ರಾಧಿಕಾರಸಂಸ್ಥೆಗಳು ವೃತ್ತಿಪರಪರೀಕ್ಷೆ ಕೈಗೊಂಡಸಂದರ್ಭದಲ್ಲಿ ಮಾಂಗಲ್ಯಸರವನ್ನು ತೆಗೆಸಿರಲಿಲ್ಲವೇ?.ಆಗ ಇದುದೊಡ್ಡ ವಿಚಾರವಾಗುವುದಿಲ್ಲ.ಉನ್ನತ ಶಿಕ್ಷಣದಪರೀಕ್ಷೆಗಳಿಗೆ ನಿಯಮಗಳನ್ನುರೂಪಿಸರುವುದು ಕೇಂದ್ರೀಯಸಂಸ್ಥೆಗಳಲ್ಲವೇ?. ಇದಕ್ಕೆರಾಜ್ಯಗಳನ್ನು ಹೊಣೆಮಾಡುವುದು ಸರಿಯಾ?ಎಂದು ಸಚಿವರುಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net