

ಚಿಕ್ಕಬಳ್ಳಾಪುರ: ಬಾಲ್ಯ ವಿವಾಹ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದೊಂದಿಗೆ ವಧುವರರ ಮದುವೆಯ ವಯಸ್ಸಿನ ದೃಢೀಕರಣಕ್ಕಾಗಿ ಶಾಲಾ ದಾಖಲೆಗಳನ್ನುಪ್ರಮುಖವಾಗಿ ಪರಿಗಣಿಸಲು ಜಿಲ್ಲಾಡಳಿತ ಸೂಚಿಸಿದೆ.
ಸಾಮಾಜಿಕ ಪಿಡುಗು ಬಾಲ್ಯ ವಿವಾಹವು ದೇಶದ ಅಭಿವೃದ್ಧಿಗೆ ಮಾರಕ.ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಅಗತ್ಯಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಜಿ.ಪ್ರಭುಮನವಿ ಮಾಡಿದ್ದಾರೆ.
ಬಾಲ್ಯ ವಿವಾಹವು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಇದರ ಅರಿವಿನ ನಡುವೆಯೂ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳುನಿರಂತರವಾಗಿ ವರದಿಯಾಗುತ್ತಿವೆ. ಇದಕ್ಕೆ ಪೂಜಾರಿಗಳು, ಧಾರ್ಮಿಕ ಪುರೋಹಿತರು, ಹಜರತ್, ಚರ್ಚ್ ಫಾದರ್ಸ್, ಖಾಜಿಗಳು, ಲಗ್ನಪತ್ರಿಕೆ ಮುದ್ರಿಸುವಮುದ್ರಣಕಾರರು ಮತ್ತು ಡಿಟಿಪಿ ಕೇಂದ್ರ ನಿರ್ವಾಹಕರು ಕಡ್ಡಾಯವಾಗಿ ಮದುವೆಯ ವಿಚಾರವಾಗಿ ಶಾಲಾ ದಾಖಲೆಗಳನ್ನುಪರಿಶೀಲಿಸಿ, ವಧು ವರರ ವಯಸ್ಸಿನ ದೃಢಪಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಬಾಲ್ಯ ವಿವಾಹದಲ್ಲಿಪ್ರತ್ಯಕ್ಷ ಹಾಗೂ ಪರೋಕ್ಷ ಭಾಗಿಯಾದವರಿಗೆ ಕಾನೂನು ಪ್ರಕಾರ 2 ವರ್ಷ ಜೈಲು, 1 ಲಕ್ಷ ದಂಡ ಶಿಕ್ಷೆ ವಿಧಿಸಲಾಗುತ್ತದೆ.ಇದಕ್ಕೆ ಅವಕಾಶ ನೀಡದಿರಲು ಮದುವೆ ಮಾಡುವ ಮೊದಲು ವಧು ವರರ ವಯಸ್ಸನ್ನು ದೃಢಪಡಿಸಿಕೊಳ್ಳಬೇಕು.ಇದಕ್ಕೆ ಜನನ ಪ್ರಮಾಣ ಪತ್ರ/ಶಾಲಾ ದಾಖಲಾತಿ ಪತ್ರ/ಎಸ್ಸೆಸ್ಸೆಲ್ಸಿಅಂಕಪಟ್ಟಿ ಇಲ್ಲವೇ ಸರ್ಕಾರಿ ವೈದ್ಯರು ರೇಡಿಯೋಲಜಿ ಪರೀಕ್ಷೆ ನಡೆಸಿ ನೀಡಿದ ವಯಸ್ಸಿನ ಪ್ರಮಾಣ ಪತ್ರಗಳನ್ನು ಮಾತ್ರ ಪರಿಗಣಿಸಬೇಕು. ಯಾವುದೇ ಕಾರಣಕ್ಕೂ ಆಧಾರ್ ಕಾರ್ಡ್ ಅನ್ನು ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿಲ್ಲಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.