

ಚಿಕ್ಕಬಳ್ಳಾಪುರ: ಅನಿಲ ಸಿಲಿಂಡರ್ ದರ ಹೆಚ್ಚಳಕ್ಕೆ ವಿವಿಧ ಸಂಘಟನೆಗಳು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿವೆ.
ಇಲ್ಲಿನ ತಾಲೂಕು ಕಚೇರಿ ಎದುರು ಅಟೋ ಚಾಲಕರು ಹಾಗೂ ಮಾಲೀಕರು ಧರಣಿ ಕುಳಿತು, ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ತಾಲೂಕು ಆಡಳಿತದ ಮೂಲಕಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಇದರ ನಡುವೆ ಆಟೋ ವಾಹನಗಳ ಅನಿಲ ಸಿಲಿಂಡರ್ ದರವನ್ನು ಏರಿಸಲಾಗಿದೆ. ಮೊದಲೇ ನಿರ್ವಹಣೆವೆಚ್ಚ ಹೆಚ್ಚಳ, ಕಡಿಮೆ ಬಾಡಿಗೆ ದರ ಸೇರಿದಂತೆ ನಾನಾ ಸಮಸ್ಯೆಗಳ ನಡುವೆ ಸರ್ಕಾರವುದಿಢೀರನೇ ದುಬಾರಿ ಬೆಲೆ ನಿಗದಿಯ ಮೂಲಕ ಪೆಟ್ಟು ನೀಡಿದೆ ಎಂದು ಆರೋಪಿಸಿದರು. ಆಟೋ ಚಾಲಕ ಸಂಘದ ಅಧ್ಯಕ್ಷ ಡಾಂಬು ಶ್ರೀನಿವಾಸ್, ಪದಾಧಿಕಾರಿ ಮೊಬೈಲ್ ಬಾಬು ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಮತ್ತೊಂದೆಡೆ ಚಿಕ್ಕಬಳ್ಳಾಪುರ ತಾಲೂಕಿನ ಸೇಟ್ ದಿನ್ನೆಯ ಕಾಲನಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯರ್ಕತರುಸೌದೆ ಒಲೆಯಲ್ಲಿ ಅಡುಗೆ ತಯಾರಿಸುವ ಮೂಲಕ ಪ್ರತಿಭಟಿಸಿತು.
ಮಧ್ಯ ಪ್ರಾಚ್ಯದಲ್ಲಿ ನಿರಂತರವಾಗಿ ಯುದ್ದ ನಡೆಯುತ್ತಿರುವುದರ ನಡುವೆ ಅಡುಗೆ ಅನಿಲ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಗೆ ಮೊದಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ, ಪ್ರಚಾರದಲ್ಲಿ ಅಭಿವೃದ್ಧಿ ಹಾಗೂ ಸಾಧನೆಯನ್ನು ಹೇಳಿಕೊಳ್ಳುವಂತಹ ಕೇಂದ್ರ ಸರ್ಕಾರದಬುರುಡೆ ಮಾತುಗಳು ಅಭಾವ ಸೃಷ್ಟಿಯಿಂದ ಮತ್ತೊಮ್ಮೆ ಬಟಾಬಯಲಾಗಿದೆ ಎಂದು ಆರೋಪಿಸಿದರು.