ಹುಣ್ಣಿಮೆ ದಿನ ನಂದಿ ಗಿರಿ ಪ್ರದಕ್ಷಿಣೆ ಹಾಕಿದ ಭಕ್ತ ಸಮೂಹ

ನಂದಿಯಲ್ಲಿ ಗಿರಿ ಪ್ರದಕ್ಷಿಣೆಗೆ ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು,
ನಂದಿಯಲ್ಲಿ ಗಿರಿ ಪ್ರದಕ್ಷಿಣೆಗೆ ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು,
Published on

ಚಿಕ್ಕಬಳ್ಳಾಪುರ: ಪುರಾಣಪ್ರಸಿದ್ಧ ನಂದಿಯಲ್ಲಿ ಹುಣ್ಣಿಮೆ ದಿನದಅಂಗವಾಗಿ ನಂದಿ ಗಿರಿಪ್ರದಕ್ಷಿಣೆ ಕೈಗೊಂಡಿದ್ದು ಸಂಸದ ಡಾ ಕೆ.ಸುಧಾಕರ್‌ನೇತೃತ್ವದಲ್ಲಿ ಸಹಸ್ರಾರು ಭಕ್ತರು ಕಾಲ್ನಡಿಗೆಯಲ್ಲಿ ಸಾಗಿದರು.

ನಂದಿಯ ಶ್ರೀಭೋಗನಂದೀಶ್ವರ ಸ್ವಾಮಿದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಕೆಯೊಂದಿಗೆಆದಿಚುಂಚನಗಿರಿ ಮಠದಪೀಠಾಧಿಪತಿ ಶ್ರೀನಿರ್ಮಲಾನಂದನಾಥ ಸ್ವಾಮೀಜಿನಂದಿ ಗಿರಿಪ್ರದಕ್ಷಿಣೆಗೆ ಚಾಲನೆನೀಡಿದರು.

ಪಾಕೃತಿಕ ಸೊಬಗಿನವಾತಾವರಣದಲ್ಲಿನ ಪುರಾಣಪ್ರಸಿದ್ಧ ದೇವಾಲಯಗಳಹಾಗೂ ಗಿರಿಪ್ರದಕ್ಷಿಣೆ ಹಾಕುವಂತಹಕಾರ್ಯಕ್ರಮಗಳಲ್ಲಿನ ನಿರಂತರಸಹಭಾಗಿತ್ವವು ದೈಹಿಕಹಾಗೂ ಮಾನಸಿಕಬಲವನ್ನು ಹೆಚ್ಚಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ಉತ್ತರ,ಬೆಂಗಳೂರು ನಗರ,ಕೋಲಾರ, ಚಿಕ್ಕಬಳ್ಳಾಪುರಸೇರಿದಂತೆ ಭಾಗದ ಜನರುಪ್ರತಿ ಹುಣ್ಣಿಮೆತಮಿಳುನಾಡಿನ ತಿರುವನಮಲೈಗೆಹೋಗಿ ಅರುಣಾಚಲೇಶ್ವರದೇಗುಲದ ಪ್ರದಕ್ಷಿಣೆಹಾಕುತ್ತಾರೆ. ಅಲ್ಲಿನಜನದಟ್ಟಣೆಯ ಹೆಚ್ಚಳದಿಂದನಾನಾ ರೀತಿಯತೊಂದರೆ ಅನುಭವಿಸುವಂತಹಮಾತುಗಳು ಕೇಳಿಬರುತ್ತವೆ. ಇದರನಡುವೆ ಪುಣ್ಯಕ್ಷೇತ್ರನಂದಿಯಲ್ಲಿ ಅರುಣಚಲೇಶ್ವರಸ್ವಾಮಿ, ಶ್ರೀಭೋಗನಂದೀಶ್ವರ, ಶ್ರೀಯೋಗ ನಂದೀಶ್ವರಸ್ವಾಮಿ ನೆಲೆಸಿರುವನಂದಿ ಗಿರಿಪ್ರದಕ್ಷಿಣೆ ಹಾಕುವಂತಹಕಾರ್ಯಕ್ರಮ ಯಶಸ್ವಿಯಾಗಿನಡೆಯುತ್ತಿದೆ. ಮುಂಬರುವದಿನಗಳಲ್ಲಿ ಭಕ್ತಸಮೂಹದ ಪ್ರಮಾಣವುಹೆಚ್ಚಳವಾಗುವ ನಿರೀಕ್ಷೆಇದೆ ಎಂದುಸಂಸದ ಡಾಕೆ.ಸುಧಾಕರ್ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net