ಆಂಟಿ ರೌಡಿ ಸ್ಕ್ವಾಡ್‌ಗಳ ರಚನೆ, ವಿಶೇಷ ಕಾರ್ಯಾಚರಣೆ ಚುರುಕು

ಪೊಲೀಸ್‌ ಠಾಣೆಯಲ್ಲಿ ರೌಡಿಶೀಟರ್‌ ಗಳ ಪರೇಡ್
ಪೊಲೀಸ್‌ ಠಾಣೆಯಲ್ಲಿ ರೌಡಿಶೀಟರ್‌ ಗಳ ಪರೇಡ್
Published on

ಚಿಕ್ಕಬಳ್ಳಾಪುರ:ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆದೇಶದ ಹಿನ್ನೆಲೆಯಲ್ಲಿ ರೌಡಿಸಂ, ಸಮಾಜಘಾತುಕ ಚಟುವಟಿಕೆಗೆ ಕಡಿವಾಣಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯು ಆಂಟಿ-ರೌಡಿ ಸ್ಕ್ವಾಡ್ಗಳನ್ನು ರಚಿಸಿದ್ದು ವಿಶೇಷಕಾರ್ಯಾಚರಣೆಗಳನ್ನು ಚುರುಕುಗೊಳಿಸಿದೆ.

ಈಗಾಗಲೇ ಜಿಲ್ಲೆಯ ಎಲ್ಲ ಪೊಲೀಸ್‌ಠಾಣೆಯಲ್ಲಿ ರೌಡಿ ಪರೇಡ್‌ ಗಳನ್ನು ಕೈಗೊಂಡು ರೌಡಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನುನೀಡಲಾಗಿದೆ. ಹಾಗೆಯೇ ನಿರಂತರ ನಿಗಾ ವಹಿಸಲು ೬೫ ಸಿಬ್ಬಂದಿಯನ್ನೊಳಗೊಂಡ ರೌಡಿ ವಿರೋಧಿ ವಿಶೇಷದಳವನ್ನು ರಚಿಸಲಾಗಿದೆ. ಇದರ ನಡುವೆ ಜಿಲ್ಲಾದ್ಯಂತ ವಿಶೇಷ ಕಾರ್ಯಾಚರಣೆಗಳನ್ನು ಕೈಗೊಂಡಿದ್ದು ದಿಢೀರ್‌ ತಪಾಸಣೆ, ಸಂಬಂಧಪಟ್ಟವರ ಮನೆಗಳಲ್ಲಿ ಮಾಹಿತಿಸಂಗ್ರಹ, ಬೀಟ್‌ ಪೊಲೀಸ್‌ ವರದಿ ಪರಿಶೀಲನೆ ನಡೆದಿದೆ. ಇದೇ ವೇಳೆ 189 ರೌಡಿ ಶೀಟರ್ಗಳನ್ನು ಪರಿಶೀಲಿಸಿ, ಅವರ ಚಟುವಟಿಕೆಯ ಮಾಹಿತಿ ಸಂಗ್ರಹಿಸಲಾಗಿದ್ದುಆಂಟಿ-ರೌಡಿ ಸ್ಕ್ವಾಡ್ ಕೈಗೊಂಡ ಕ್ರಮಗಳ ಮೇಲ್ವಿಚಾರಣೆಗಾಗಿ ಎಲ್ಲ ಠಾಣೆಗಳಲ್ಲಿ ಪ್ರತ್ಯೇಕ ದಾಖಲೆ ಪುಸ್ತಕಗಳನಿರ್ವಹಣೆ ಆರಂಭಿಸಲಾಗಿದೆ.

ಪ್ರಸ್ತುತ ೭೪೧ ಜನರು ರೌಡಿ ಪಟ್ಟಿಯಲ್ಲಿದ್ದಾರೆ. ಕಳೆದ ೧೦ವರ್ಷಗಳಿಂದಲೂ ಯಾವುದೇ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದೇ ಸನ್ನಡತೆಯನ್ನುಹೊಂದಿರುವವರನ್ನು, ಅದರಲ್ಲೂ ಇದರಲ್ಲಿನ ೬೦ ವರ್ಷದಾಟಿದವರನ್ನು ನಿಯಮಾನುಸಾರ ಪಟ್ಟಿಯಿಂದ ಕೈ ಬಿಡಲಾಗುತ್ತದೆ. ಪ್ರಸಕ್ತಸಾಲಿನಲ್ಲಿ 15 ಪ್ರಸ್ತಾವನೆಗಳುಸಲ್ಲಿಕೆಯಾಗಿವೆ. ಈಗಾಗಲೇ 3 ರೌಡಿಶೀಟರ್‌ ಗಳ ಗಡಿಪಾರಿನ ಆದೇಶಜಾರಿಯಾಗಿದೆ. ಮುಂಬರುವದಿನಗಳಲ್ಲಿ ಇನ್ನಷ್ಟುಅರ್ಹ ಪ್ರಕರಣಗಳಲ್ಲಿಗಡಿಪಾರಿಗೆ ರೌಡಿಗಳನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net