

ಗೌರಿಬಿದನೂರು: ಕಿವಿಯೊಲೆಕಿತ್ತುಕೊಳ್ಳಲು ಹಲ್ಲೆ ನಡೆಸಿ, ವೃದ್ಧೆಯ ಸಾವಿಗೆಕಾರಣನಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗೌರಿಬಿದನೂರು ತಾಲೂಕಿನ ಬಸವನಹಳ್ಳಿಯಆಟೋ ಚಾಲಕ ಬಿ.ಜಿ.ಕುಮಾರ್ (೨೦ ವರ್ಷ). ತ್ವರಿತವಾಗಿ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರುಸ್ಥಳೀಯ ಚಲನವಲನಗಳ ಬೆಳವಣಿಗೆಯನ್ನಾಧಾರಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕುಜೀವಗಾನಹಳ್ಳಿ ಗ್ರಾಮದಸುಬ್ಬಮ್ಮ(80) ಮೃತದುರ್ದೈವಿ.
ತಮ್ಮ 5ನೇಪುತ್ರಿ ವೆಂಕಟಮ್ಮಳನ್ನು ತಾಲೂಕಿನ ಬಸವನಹಳ್ಳಿಗ್ರಾಮಕ್ಕೆ ಕೊಟ್ಟುವಿವಾಹ ಮಾಡಲಾಗಿದೆ.ಪುತ್ರಿಯನ್ನು ನೋಡಲೆಂದುಕಳೆದ 5 ದಿನಗಳಹಿಂದೆ ಮಗಳಮನೆಗೆ ಸುಬ್ಬಮ್ಮಆಗಮಿಸಿದ್ದರು. ಮಧ್ಯಾಹ್ನ2 ಗಂಟೆ ಸಮಯದಲ್ಲಿವೃದ್ದೆ ಸುಬ್ಬಮ್ಮಒಬ್ಬರೆ ಮನೆಯಲ್ಲಿದ್ದಾಗಆಗಮಿಸಿದ ದುಷ್ಕರ್ಮಿಯುಓಲೆ ಕಿತ್ತುಕೊಂಡುಮಾರಣಾಂತಿಕ ಹಲ್ಲೆಮಾಡಿ ಪರಾರಿಯಾಗಿದ್ದುಮಗಳು ಕೂಲಿಕೆಲಸ ಮುಗಿಸಿಕೊಂಡುಮನೆಗೆ ವಾಪಾಸ್ಬಂದಾಗ ಪ್ರಜ್ಞೆ ತಪ್ಪಿದ್ದ ಸುಬ್ಬಮ್ಮ ಕಾಣಿಸಿದ್ದು ತಕ್ಷಣಸರ್ಕಾರಿ ಆಸ್ಪತ್ರೆಗೆಕರೆದೊಯ್ದು ಚಿಕಿತ್ಸೆಕೊಡಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ವೃದ್ಧೆಮೃತಪಟ್ಟಿದ್ದಾರೆ.
ಮೊಮ್ಮಗ ಶ್ರೀನಿವಾಸ ಪೊಲೀಸ್‌ಠಾಣೆಗೆ ದೂರು ನೀಡಿದ್ದು ಮಂಚೇನಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇನ್ನುಘಟನೆಯ ಸ್ಥಳಕ್ಕೆ ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ಕುಶಾಲ್ಚೌಕ್ಸೆ, ಭೇಟಿನೀಡಿ ಪರಿಶೀಲಿಸಿ, ಮಾಹಿತಿ ಪಡೆದುಕೊಂಡಿದ್ದರು.