

ಚಿಕ್ಕಬಳ್ಳಾಪುರ: ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆಅವರ ಕುಟುಂಬದವರನ್ನುಬಿಟ್ಟು ಬೇರೆಯಾರೇ ಒಕ್ಕಲಿಗರು,ಶೋಷಿತರು ಬೆಳೆಯಬಾರದು.ಡಿ.ಕೆ.ಶಿವಕುಮಾರ್ಮುಖ್ಯಮಂತ್ರಿಯಾಗಿರುವುದನ್ನು ಸಹಿಸಲಾಗುತ್ತಿಲ್ಲಎಂದು ಶಾಸಕಪ್ರದೀಪ್ ಈಶ್ವರ್ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದಲ್ಲಿ ಸುದ್ದಿಗಾರರೊಂದಿಗೆಮಾತನಾಡಿದ ಅವರು,ಚಿಕ್ಕಬಳ್ಳಾಪುರದಲ್ಲಿ ಕೈಗೊಂಡಿದ್ದ ಕೆಂಪೇಗೌಡಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಜೆಡಿಎಸ್ ನವರು ಗದ್ದಲಎಬ್ಬಿಸಿದ್ದು ಸರೀನಾ?. ಅವರನಾಯಕರು ಭಾಗವಹಿಸಿದಕಾರ್ಯಕ್ರಮಗಳಲ್ಲಿ ಹೀಗೆಮಾಡಿದರೆ ಏನಾಗುತ್ತದೆ?ನಾವು ಏನಾದರೂಮಾಡಿಸಬೇಕಾ?. ನಮಗೂಬರಲ್ಲವಾ? ಎಂದುಖಾರವಾಗಿ ಪ್ರಶ್ನಿಸಿದ್ದಾರೆ.
ಶೋಷಿತ ವರ್ಗ,ಹಿಂದುಳಿದ ವರ್ಗದಹುಡುಗ ಜನಪ್ರತಿನಿಧಿಯಾಗುವುದನ್ನುಸಹಿಸಲಾಗುತ್ತಿಲ್ಲ. ಇದಕ್ಕೆಚೇಲಾಗಳನ್ನು ಬಿಟ್ಟಿದ್ದಾರೆ.ಆದರೆ, ಇದಕ್ಕೆಲ್ಲಹೆದರುವುದಿಲ್ಲ. ಕುಮಾರಸ್ವಾಮಿಗೆತಾಕತ್ತಿದ್ದಲ್ಲಿ ಚಿಕ್ಕಬಳ್ಳಾಪುರಕ್ಕೆಬಂದು ನನ್ನವಿರುದ್ಧ ಸ್ಪರ್ಧಿಸಲಿ,ಇಂತಹ ಸಣ್ಣಕೆಲಸವನ್ನು ಬಿಡಲಿಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಬಗ್ಗೆ ಹೊಗಳಿಮಾತನಾಡುತ್ತಿರುವುದರಿಂದ ನನ್ನನ್ನುಟಾರ್ಗೆಟ್ ಮಾಡಲಾಗುತ್ತದೆ.ಒಕ್ಕಲಿಗ ಜನಾಂಗದವರುರಾಜ್ಯದ ಆಡಳಿತಚುಕ್ಕಾಣಿ ಹಿಡಿಯಬಾರದಾ?ಹಿಂದುಳಿದ ವರ್ಗದಹುಡುಗ ಶಾಸಕನಾಗಿಇರಬಾರದಾ? ಎಂದುಪ್ರಶ್ನಿಸಿದ್ದಾರೆ.