ಪ್ರಾಕೃತಿಕ ವಿಕೋಪಕ್ಕೆ ಬೆಳೆ ನಾಶ, ವೈಜ್ಞಾನಿಕ ಪರಿಹಾರಕ್ಕೆ ಸಂಸದರ ಆಗ್ರಹ

ಚಿಕ್ಕಬಳ್ಳಾಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆ ನಾಶದಿಂದ ನಷ್ಟ ಅನುಭವಿಸಿದ ರೈತರ ಜಮೀನುಗಳಿಗೆ ಸಂಸದ ಡಾ ಕೆ.ಸುಧಾಕರ್‌ ಭೇಟಿ ನೀಡಿದರು.
ಚಿಕ್ಕಬಳ್ಳಾಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆ ನಾಶದಿಂದ ನಷ್ಟ ಅನುಭವಿಸಿದ ರೈತರ ಜಮೀನುಗಳಿಗೆ ಸಂಸದ ಡಾ ಕೆ.ಸುಧಾಕರ್‌ ಭೇಟಿ ನೀಡಿದರು.
Published on

ಚಿಕ್ಕಬಳ್ಳಾಪುರ: ಪ್ರಾಕೃತಿಕ ವಿಕೋಪದಿಂದ ಹಾಳಾದ ಬೆಳೆಗಳಿಗೆ ನಷ್ಟ ಪರಿಹಾರವನ್ನು ವೈಜ್ಞಾನಿಕವಾಗಿ ನಿಗದಿಪಡಿಸಬೇಕು ಎಂದು ಸಂಸದ ಡಾ ಕೆ.ಸುಧಾಕರ್ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆ ನಾಶದಿಂದ ನಷ್ಟ ಅನುಭವಿಸಿದ ರೈತರ ಜಮೀನುಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿತ, ಕೊಳವೆ ಬಾವಿ ವೈಫಲ್ಯ ಸೇರಿದಂತೆ ವಿವಿಧ ಸಮಸ್ಯೆಗಳ ನಡುವೆ ಲಕ್ಷಾಂತರ ರೂ ಬಂಡವಾಳ ಹೂಡಿ ರೈತರು ಕೃಷಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಲಾಭ ಸಿಗುವುದಿಲ್ಲ. ಇನ್ನು ನಿರಂತರ ಪ್ರಾಕೃತಿಕ ವಿಕೋಪಗಳಿಗೆ ಬೆಳೆಗಳು ಹಾಳಾಗಿ ನಷ್ಟ ಅನುಭವಿಸುವಂತಾಗಿದೆ ಎಂದು ಬೇಸರಿಸಿದರು.

ಇತ್ತೀಚೆಗೆ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೋಟ್ಯಂತರ ರೂ ಮೌಲ್ಯದ ಬೆಳೆಗಳು ಹಾಳಾಗಿವೆ. ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಸಾಲದ ಹೊರೆಯಿಂದ ಹೊರ ಬರುವ ಆತಂಕದಲ್ಲಿದ್ದು ಇದನ್ನರಿತುಕೊಂಡು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತ್ವರಿತವಾಗಿ ಸರ್ವೇ ಕೈಗೊಳ್ಳಬೇಕು. ವರದಿಯನ್ನಾಧಾರಿಸಿದಂತೆ ವೈಜ್ಞಾನಿಕ ಪರಿಹಾರವನ್ನು ರೈತರಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು.

ರೈತರಾದ ತಾಲೂಕಿನ ದಿಬ್ಬೂರು ಗ್ರಾಮದ ಪಾಪೇಗೌಡ, ಮೋಹನ್‌, ರಮೇಶ್‌,  ವೆಂಕಟೇಶ್‌, ಚಂದ್ರಪ್ಪ, ಡಾ ಪಾಪೇಗೌಡ ಸೇರಿದಂತೆ ಹಲವರು ದ್ರಾಕ್ಷಿ ಬೆಳೆ ಆಲಿಕಲ್ಲು ಮಳೆಗೆ ಹಾಳಾಗಿರುವುದು, ಸಾಲದ ಹೊರೆನಿರೀಕ್ಷೆಯ ನೆರವಿನ ವಿಚಾರವಾಗಿ ಗಮನ ಸೆಳೆದರು. ವೈಜ್ಞಾನಿಕ ಪರಿಹಾರ ನೀಡುವುದರ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚಿಸಲು ಮನವಿ ಮಾಡಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net