

ಚಿಕ್ಕಬಳ್ಳಾಪುರ: ಕೇಂದ್ರ ಸಚಿವಎಚ್.ಡಿ.ಕುಮಾರಸ್ವಾಮಿವಿರುದ್ಧ ಹೇಳಿಕೆನೀಡಿರುವ ಶಾಸಕಪ್ರದೀಪ್ ಈಶ್ವರ್ ಕ್ಷಮೆಯಾಚಿಸಬೇಕು. ಅವರನ್ನುಕೆಂಪೇಗೌಡ ಜಯಂತ್ಯುತ್ಸವ ಕಾರ್ಯಕ್ರಮದಿಂದಹೊರಗೆ ಕಳುಹಿಸಬೇಕುಎಂದು ಪಟ್ಟುಹಿಡಿದ ಜೆಡಿಎಸ್ನ ಗುಂಪೊಂದುಮುತ್ತಿಗೆ ಹಾಕಿತ್ತು. ಪೊಲೀಸ್ಭದ್ರತೆಯ ನಡುವೆಯೂಏಕಾಏಕಿ ಬೃಹತ್ಗೇಟ್ ತಳ್ಳಿ,ಕಾರ್ಯಕ್ರಮ ವೇದಿಕೆಯತ್ತನುಗ್ಗಿದ್ದು ಧಿಕ್ಕಾರದ ಘೋಷಣೆಗಳನ್ನುಕೂಗಿ ಆಕ್ರೋಶವ್ಯಕ್ತಪಡಿಸಿತು.
ಎಚ್.ಡಿ.ಕುಮಾರಸ್ವಾಮಿಬಗ್ಗೆ ಮಾತನಾಡುವಯೋಗ್ಯತೆ ಶಾಸಕರಿಗಿಲ್ಲ.ಕೂಡಲೇ ಕ್ಷಮೆಯಾಚಿಸಿಹೊರಗೆ ಹೋಗಬೇಕು.ಅಲ್ಲಿಯವರೆಗೂ ಕಾರ್ಯಕ್ರಮವನ್ನುಸರಾಗವಾಗಿ ನಡೆಸಲುಬಿಡುವುದಿಲ್ಲ ಎಂದುಕಿಡಿಕಾರಿದ್ದಾರೆ. ಇದೇ ವೇಳೆಆದಿಚುಂಚನಗಿರಿ ಚಿಕ್ಕಬಳ್ಳಾಪುರಶಾಖಾ ಮಠದಶ್ರೀ ಮಂಗಳನಾಥಸ್ವಾಮೀಜಿ,ಜಿಲ್ಲಾಧಿಕಾರಿ ಜಿ.ಪ್ರಭುಮಧ್ಯೆ ಪ್ರವೇಶಿಸಿಜನರನ್ನು ಸಮಾಧಾನಪಡಿಸಿದರು.ಸರ್ಕಾರಿ ಕಾರ್ಯಕ್ರಮದಲ್ಲಿಗದ್ದಲ ಎಬ್ಬಿಸುವುದುಸರಿಯಲ್ಲ. ಜನಾಂಗಕ್ಕೆಕೆಟ್ಟ ಹೆಸರುತರುವುದು ಬೇಡ,ಎಲ್ಲ ಮುಗಿದಬಳಿಕ ಸಮಸ್ಯೆಯಬಗ್ಗೆ ಒಂದೆಡೆಕುಳಿತು ಮಾತುಕತೆಯಮೂಲಕ ಸಮಸ್ಯೆಯನ್ನುಬಗೆಹರಿಸೋಣ ಎಂದು ಎಂಬುದಾಗಿ ಸಲಹೆನೀಡಿ, ಪರಿಸ್ಥಿತಿತಿಳಿಗೊಳಿಸಿದರು. ಮತ್ತೆಸಿಡಿದೆದ್ದ ಗುಂಪನ್ನು ಚದುರಿಸಲುಪೊಲೀಸರು ಲಾಠಿಬೀಸಿದ್ದಾರೆ. ಮತ್ತೊಂದೆಡೆ ಸ್ವಪಕ್ಷೀಯ ಶಾಸಕರ ವಿರುದ್ಧ ಗುಂಪು ಮಾತಿನಚಕಮಕಿಯ ಜತೆಗೆ ಗಲಾಟೆ ನಡೆಸಿ, ಅವಮಾನಿಸಿದರೂ ಸಹ ಸ್ಥಳದಲ್ಲಿದ್ದ ಕಾಂಗ್ರೆಸ್ ಮುಖಂಡರು ಮೌನತಂತ್ರಗಾರಿಕೆ ಅನುಸರಿಸಿದ್ದಾರೆ.