

ಚಿಕ್ಕಬಳ್ಳಾಪುರ: ನಗರದ ಕನ್ನಡ ಭವನದಲ್ಲಿಕೈಗೊಂಡಿದ್ದ ಕೆಂಪೇಗೌಡಜಯಂತ್ಯುತ್ಸವದ ಸರ್ಕಾರಿ ಕಾರ್ಯಕ್ರಮದಲ್ಲಿ ಗಲಾಟೆಪ್ರಕರಣಕ್ಕೆ ಸಂಬಂಧಿಸಿದಂತೆನಾಲ್ವರು ಆರೋಪಿಗಳನ್ನುನ್ಯಾಯಾಂಗ ಬಂಧನಕ್ಕೆಒಪ್ಪಿಸಲಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನಅಂದಾರ್ಲಹಳ್ಳಿಯ ಮೋಹನ್ ರಾಜ್, ಜೀಡಮಾಕಲಹಳ್ಳಿಯ ಅಖಿಲ್ ರೆಡ್ಡಿ, ತಾಳಹಳ್ಳಿಯ ಮಹೇಂದ್ರ ಹಾಗೂ ಶಾಸಕರ ಮೇಲೆ ಶೂ ಎಸೆದಅಡವಿಗೊಲ್ಲವಾರಹಳ್ಳಿಯ ಪ್ರಕಾಶ್ ಬಂಧಿತರು. ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್‌ಎಸ್.ಎಂ.ಅಮರ್ ನೀಡಿದ ದೂರಿನಂತೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ನಗರಠಾಣೆಯ ಪೊಲೀಸರುಆರೋಪಿಗಳಿಗೆ ವೈದ್ಯಕೀಯಪರೀಕ್ಷೆ ನಡೆಸಿದಬಳಿಕ ಜಿಲ್ಲಾನ್ಯಾಯಾಲಯದ ನ್ಯಾಯಾಧೀಶರುಹಾಜರುಪಡಿಸಿದರು. ಆಗ೧೪ ದಿನಗಳನ್ಯಾಯಾಂಗ ಬಂಧನಕ್ಕೆಒಪ್ಪಿಸಿ ಆದೇಶವಾಗಿದ್ದುನಾಲ್ವರನ್ನು ಚಿಕ್ಕಬಳ್ಳಾಪುರತಾಲೂಕಿನ ಅಣಕನಕೂರುಸಮೀಪದ ಜಿಲ್ಲಾಕಾರಾಗೃಹದಲ್ಲಿರಿಸಲಾಗಿದೆ.