ಸಾಯಿಕೃಷ್ಣನ್‌ ಕ್ರೀಡಾಂಗಣದಲ್ಲಿ ಮಕ್ಕಳ ಸಾಹಸಮಯ ಆಕರ್ಷಕ ಪ್ರದರ್ಶನ

ವಿದ್ಯಾರ್ಥಿಗಳ ಸಾಹಸ ಪ್ರದರ್ಶನ
ವಿದ್ಯಾರ್ಥಿಗಳ ಸಾಹಸ ಪ್ರದರ್ಶನ
Published on

ಚಿಕ್ಕಬಳ್ಳಾಪುರ: ಸಾಮೂಹಿಕವಾಗಿ ಬೈಕುಗಳಲ್ಲಿ ಸಂಚಾರ, ವಾಹನ ಸಮೇತರಿಂಗ್‌ ನೊಳಗೆ ನುಗ್ಗಿದ ಸವಾರ, ಕಂಬದ ಮೇಲೆ ಗುಂಪು ಕಲಾಕೃತಿಗಳ ರಚನೆ, ಮೈ ನವಿರೇಳಿಸುವ ಕರಾಟೆಕೌಶಲ ಹಾಗೂ ಆಕರ್ಷಕ ಕಲಾ ನೃತ್ಯ.

ಇವು ತಾಲೂಕಿನ ಮುದ್ದೇನಹಳ್ಳಿಯಲ್ಲಿನ ಸಾಯಿ ಕೃಷ್ಣನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ಕೈಗೊಂಡಿದ್ದಸತ್ಯ ಸಾಯಿ ಲೋಕಸೇವಾ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿಕಂಡು ಬಂದ ವಿದ್ಯಾರ್ಥಿಗಳ ಸಾಹಸಮಯ ಪ್ರದರ್ಶನಗಳು.ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿನಸಾಯಿ ವಿದ್ಯಾಸಂಸ್ಥೆಗಳ 2800 ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರಸಮಾಗಮದಿಂದ ಅಕ್ಷರಶಃ ಕ್ರೀಡಾ ಹಾಗೂ ಸಾಂಸ್ಕೃತಿಕ ಜಾತ್ರೆವಾತಾವರಣವೇ ನಿರ್ಮಾಣವಾಗಿತ್ತು.

ಯಕ್ಷಗಾನ, ಬಾಂಗ್ರಾ ನೃತ್ಯ, ವಾರ್ಕರಿ, ಕಾವಾಡಿ, ಕಂಸಾಳೆ ನೃತ್ಯ, ದಂಡಿಯಾ ರಾಸ್‌, ಗರ್ಭಾ ನೃತ್ಯ ಸೇರಿದಂತೆಇತರ ಪ್ರದರ್ಶನಗಳು ಗಮನ ಸೆಳೆದವು.

ʼಒಂದು ಜಗತ್ತು-ಒಂದು ಕುಟುಂಬʼ ಮಾನವೀಯ ಸೇವಾ ಅಭಿಯಾನದ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ದೆಹಲಿಪ್ರತಿನಿಧಿ ಟಿ.ಬಿ.ಜಯಚಂದ್ರ,ಕ್ರಿಕೆಟ್ ತರಬೇತುದಾರ ಜಿ.ಆರ್.ವಿಶ್ವನಾಥ್,ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ಕುಶಾಲ್ಚೌಕ್ಸೆ, ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷಬಿ.ಎನ್.ನರಸಿಂಹಮೂರ್ತಿ ಮತ್ತಿತರರುಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net