ಗ್ರಾಮೀಣ ತೆರಿಗೆ ಸಂಗ್ರಹದಲ್ಲಿ ರಾಜ್ಯಕ್ಕೆ ಚಿಕ್ಕಬಳ್ಳಾಪುರ ಫಸ್ಟ್

ಗುಡಿಬಂಡೆ ತಾಲೂಕಿನ ಗ್ರಾ.ಪಂ.ಅಧಿಕಾರಿಗಳೊಂದಿಗೆ ಚರ್ಚಿಸುತ್ತಿರುವ ಚಿಕ್ಕಬಳ್ಳಾಪುರ ಜಿ.ಪಂ.ಸಿಇಒ ಡಾ ವೈ.ನವೀನ್ ಭಟ್
ಗುಡಿಬಂಡೆ ತಾಲೂಕಿನ ಗ್ರಾ.ಪಂ.ಅಧಿಕಾರಿಗಳೊಂದಿಗೆ ಚರ್ಚಿಸುತ್ತಿರುವ ಚಿಕ್ಕಬಳ್ಳಾಪುರ ಜಿ.ಪಂ.ಸಿಇಒ ಡಾ ವೈ.ನವೀನ್ ಭಟ್
Published on
ಕಳೆದ 2025 ನೇ ಸಾಲಿನ ಸೆಪ್ಟೆಂಬರ್‌ ನಿಂದ 2026 ನೇ ಸಾಲಿನ ಜ.22 ರವರೆಗೆ ಗ್ರಾ.ಪಂ.ಗಳ ತೆರಿಗೆ ಸಂಗ್ರಹದಲ್ಲಿ ಜಿಲ್ಲೆಯು ಸತತವಾಗಿ ಪ್ರಥಮ ಸ್ಥಾನದಲ್ಲಿದ್ದು ಶೇ.95.25 ರಷ್ಟು ಸಾಧನೆ ತೋರಿದೆ. ಇನ್ನು ಈಗ ರಾಯಚೂರು (ಶೇ. 94.90%) ದ್ವಿತೀಯ ಸ್ಥಾನ, ಉತ್ತರ ಕನ್ನಡ ಜಿಲ್ಲೆ (ಶೇ.84.80 ) ತೃತೀಯ ಸ್ಥಾನವನ್ನು ಪಡೆದಿದೆ.
ಜಿಲ್ಲೆಯಲ್ಲಿ 157 ಗ್ರಾ.ಪಂ.ಗಳಿದ್ದು ಇದರಲ್ಲಿ 55 ಗ್ರಾ.ಪಂ.ಗಳು ಶೇ.100 ರಷ್ಟು ತೆರಿಗೆ ಸಂಗ್ರಹಿಸಿವೆ. ಉಳಿದಂತೆ 55 ಗ್ರಾ.ಪಂ.ಗಳು ಶೇ.90 ರಷ್ಟು, 47 ಗ್ರಾ.ಪಂ.ಗಳು ಶೇ.80% ರಷ್ಟು ಸಾಧನೆ ತೋರಿವೆ.
ಜಿಲ್ಲೆಯಲ್ಲಿ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಉತ್ತಮ ಸಾಧನೆ ತೋರುವ ನಿಟ್ಟಿನಲ್ಲಿ ಜಿ.ಪಂ.ಸಿಇಒ ಡಾ ವೈ.ನವೀನ್‌ ಭಟ್‌ ಮಾರ್ಗದರ್ಶನದಲ್ಲಿ ವಿಶೇಷ ಅಭಿಯಾನವನ್ನು ಕೈಗೊಳ್ಳಲಾಗಿತ್ತು.
ಮೊದಲು ಗ್ರಾಮವಾರು ಆಸ್ತಿಗಳ ಸರ್ವೇ, ಅರಿವು ಕಾರ್ಯಕ್ರಮ, ಮನೆ ಮನೆಗೂ ಭೇಟಿ, ಸರಳ ಪದ್ದತಿಯಲ್ಲಿ ತೆರಿಗೆ ವಸೂಲಿ ಸೇರಿದಂತೆ ವಿವಿಧ ಚಟುವಟಿಕೆಯನ್ನು ಬಿರುಸಿನಿಂದ ಕೈಗೊಳ್ಳಲಾಯಿತು. ಅದರಲ್ಲೂ ಕಳೆದ ಜ.9 ರಿಂದ ಜ.23 ರವರೆಗೆ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net