

ಚಿಕ್ಕಬಳ್ಳಾಪುರ:ಚಿಂತಾಮಣಿ ತಾಲೂಕಿನ ದಿಗವಗೊಳ್ಳಹಳ್ಳಿಯಲ್ಲಿ ರಾತ್ರಿ ಭೀಕರ ಸಿಡಿಲು ಬಡಿದು ಬಾಲಕನೊಬ್ಬ ದಾರುಣವಾಗಿಮೃತಪಟ್ಟಿದ್ದಾರೆ.
ಮೃತಯುವಕ ಗ್ರಾಮದ ನಿವಾಸಿ ಯುವಕ ವಿನಯ್ (೧೫ ವರ್ಷ). ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿಯ ಬಾಪೂಜಿಫ್ರೌಢಶಾಲೆಯಲ್ಲಿ ೯ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ರಾತ್ರಿ ಗುಡಗು ಮಿಂಚು ಸಹಿತ ಮಳೆಯಾಗುತ್ತಿರುವಸಂದರ್ಭದಲ್ಲಿ ಮನೆಯಲ್ಲಿ ಊಟ ಮಾಡಿ, ತಟ್ಟೆ ತೊಳೆಯಲು ಮನೆಯಿಂದ ಹೊರಗೆ ಬಂದ ವೇಳೆ ಸಿಡಿಲು ಬಡಿದಿದೆ.ಕೂಡಲೇ ಆತ ಕಿರುಚಿಕೊಂಡು ಅಲ್ಲಿಯೇ ಕುಸಿದುಬಿದ್ದಿದ್ದಾನೆ. ಕೂಡಲೇ ಕುಟುಂಬಸ್ಥರು ಆತನನ್ನು ಚಿಂತಾಮಣಿಸಾರ್ವಜನಿಕ ಆಸ್ಪತ್ರೆಗೆ ಕರೆ ತಂದಿದ್ದು ಆಗ ಮಾರ್ಗ ಮಧ್ಯೆ ಮೃತಪಟ್ಟಿರುವುದು ತಿಳಿದು ಬಂದಿದೆ.