ಸರ್ಕಾರದ ಸಹಾಯಧನಕ್ಕೆ ನಕಲಿ ದಾಖಲೆ ಸಲ್ಲಿಸಿದ ಅರ್ಜಿದಾರ

ಕಾರ್ಮಿಕ ಇಲಾಖೆ ಅಧಿಕಾರಿ ಕಲಾವತಿ.
ಕಾರ್ಮಿಕ ಇಲಾಖೆ ಅಧಿಕಾರಿ ಕಲಾವತಿ.
Published on

ಚಿಕ್ಕಬಳ್ಳಾಪುರ: ಇಲಾಖೆಯಿಂದ ಸಹಾಯ ಧನ ಪಡೆಯಲು ಚಿಂತಾಮಣಿಯಲ್ಲಿ ಅರ್ಜಿದಾರರು ನಕಲಿ ದಾಖಲೆಗಳನ್ನು ಸಲ್ಲಿಸಿರುವುದರ ಆರೋಪ ಕೇಳಿ ಬಂದಿದೆ.

ಕಳೆದ ಎರಡುವರ್ಷಗಳ ಹಿಂದೆ ಮದುವೆಯಾಗಿರುವುದಕ್ಕೆ ಸುಳ್ಳು ದಿನಾಂಕದ ಲಗ್ನ ಪತ್ರಿಕೆ ತೋರಿಸಿ, ಸರ್ಕಾರದಿಂದ ಸಿಗುವ ಮದುವೆ ಸಹಾಯಧನ ಪಡೆಯಲು ಯತ್ನಿಸಿರುವ ನಾರಾಮಾಕಲಹಳ್ಳಿಯ ಎನ್.ಎಂ.ನರಸಿಂಹಪ್ಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿಕಾರ್ಮಿಕ ಅಧಿಕಾರಿ ಕಲಾವತಿ ತಿಳಿಸಿದ್ದಾರೆ.

ಅರ್ಜಿದಾರರು ಸುಳ್ಳು ಆರೋಪ ಮಾಡಿ, ಕಚೇರಿಯ ಎದುರು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಕಳೆದ ಮಾ.೧೧ ರಂದು ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟದ ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ಕಲ್ಯಾಣ ಮಂಟದ ಉಸ್ತುವಾರಿಯನ್ನು ಖುದ್ದು ಭೇಟಿಯಾಗಿ, ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿತನವು ಬಹಿರಂಗವಾಗಿದೆ ಎಂದು ತಿಳಿಸಿದ್ದಾರೆ. .

ನರಸಿಂಹಪ್ಪರ ಪುತ್ರಿಯ ಮದುವೆ ೨೦೨೪ . ರಂದು ತಲಕಾಯಲಬೆಟ್ಟದ ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ನಡೆದಿದೆ. ಆದರೆ, ಕರ್ಮಿಕ ಇಲಾಖೆಯ ಸಹಾಯಧನ ಹಣ ಪಡೆಯುವ ಸಲುವಾಗಿ ಕಲ್ಯಾಣ ಮಂಟದ ಉಸ್ತುವಾರಿ ಸಿಬ್ಬಂದಿಗೆ ದಿನಾಂಕವನ್ನು ಬದಲಾಯಿಸಿರುವ ನಕಲಿ ಲಗ್ನ ಪತ್ರಿಕೆ ನೀಡಿ, ಅದರಲ್ಲಿ ೨೦೨೫ . ರಂದು ಮದುವೆ ಕಾರ್ಯ ನಡೆದಿರುವ ಬಗ್ಗೆ ದೃಢೀಕರಣಕ್ಕೆ ಕೋರಲಾಗಿದೆ. ಇದೇ ವೇಳೆ ದಾಖಲೆಗಳನ್ನು ಪರಿಶೀಲಿಸದೇ ಮಂಟಪದವರು ದಾಖಲಾತಿ ನೀಡಿದ್ದಾರೆ. ಇದರ ಬಗ್ಗೆ ತನಿಖೆಯ ವೇಳೆ ಕಲ್ಯಾಣ ಮಂಟಪದವರು ಆಗಿರುವ ಅಚಾತುರ್ಯದ ಬಗ್ಗೆ ಹಿಂಬರಹ ನೀಡಿದ್ದಾರೆ ಎಂತಲೂ ತಿಳಿಸಿದ್ದಾರೆ. ಅಸಲಿಗೆ ರಾದ್ದಾಂತಕ್ಕೆ ಕಾರಣ ಮಧ್ಯವರ್ತಿ ಗಂಗರಾಜು. ಪ್ರಕರಣದಲ್ಲಿ ಪ್ರತಿಭಟಿಸಲು ಕುಮ್ಮಕ್ಕು ನೀಡಿದ ಹಿನ್ನೆಲೆಯಲ್ಲಿ ಇವರ ವಿರುದ್ಧ ಸಹ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net