ಇಲ್ಲಿನ ಮತಗಟ್ಟೆ ಅಧಿಕಾರಿ ಶಾಂತಮ್ಮ (೪೮) ಗಾಯಾಳು. ಮನೆ ಮನೆಗೆ ತೆರಳಿ, ಮತದಾರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆಯ ಅರ್ಜಿ ನಮೂನೆಯನ್ನು ವಿತರಿಸುತ್ತಿದ್ದ ಕೆಲಸದಲ್ಲಿ ಶಾಂತಮ್ಮ ತೊಡಗಿದ್ದರು. ಸಂಜೆ ಕರ್ತವ್ಯ ಮುಗಿಸಿ, ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ವೇಗ ಬಂದ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಕೆಳಗೆ ಬಿದ್ದು ಶಾಂತಮ್ಮ ತಲೆಗೆ ಗಂಭೀರ ಗಾಯವಾಗಿದೆ. ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ತಹಸೀಲ್ದಾರ್ ರಶ್ಮಿ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುವಿನ ಆರೋಗ್ಯವನ್ನು ವಿಚಾರಿಸಿದರು. ಕುಟುಂಬಸ್ಥರಿಗೆ ಇಲಾಖೆಯ ಪರವಾಗಿ ಧೈರ್ಯ ತುಂಬಿದರು. ಅಪಘಾತಕ್ಕೆ ಕಾರಣವಾದ ಕಾರನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.