ರಾಜಕೀಯ ದ್ವೇಷ: ಬಾವ-ಬಾಮೈದನ ಮೇಲೆ ಮಾರಣಾಂತಿಕ ಹಲ್ಲೆ

Attack
Published on

ಚಿಕ್ಕಬಳ್ಳಾಪುರ: ರಾಜಕೀಯ ದ್ವೇಷ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಆತನ ಬಾಮೈದನ ಮೇಲೆ ಹಲ್ಲೆ ಮಾಡಿರುವ ಘಟನೆ ಚೀಡಚಿಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚೀಡಚಿಕ್ಕನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ತಮ್ಮೇಗೌಡ‌ ಅಲಿಯಾಸ್​ ರೆಡ್ಡಿ ಹಾಗೂ ಆತನ ಬಾಮೈದ ಮಂಜುನಾಥ್ ಮೇಲೆ ಹಲ್ಲೆ ಅದೇ ಗ್ರಾಮದ ಮರಿಯಪ್ಪನ ಮಗ ಚಾಣುಕ್ಯ ಹಾಗೂ ಸ್ನೇಹಿತರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಹಾಲಿನ ಡೈರಿ ಬಳಿ ನಿಂತಿದ್ದ ವೇಳೆ ಬಾವ-ಬಾಮೈದನ ಮೇಲೆ ಹಲ್ಲೆ ಮಾಡಲಾಗಿದೆ. ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net