ಆ.10ರಂದು ತೆಕ್ಕಟ್ಟೆಯಲ್ಲಿ ಚಿಗುರು ಕಾರ್ಯಕ್ರಮ

rotary
Published on

ಕೋಟ: ರೋಟರಿ ಜಿಲ್ಲೆ 3182ರ ಜಿಲ್ಲಾ ಇಂಟರ‌್ಯಾಕ್ಟ್ ಕ್ಲಬ್‌ಗಳ ಸಮ್ಮೇಳನ ಚಿಗುರು ಕಾರ್ಯಕ್ರಮ ತೆಕ್ಕಟ್ಟೆ ರೋಟರಿ ಕ್ಲಬ್ ಸಾರಥ್ಯದಲ್ಲಿ ಆ.10ರಂದು 8.30ರಿಂದ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವರ್ಷನ್ ಹಾಲ್‌ನಲ್ಲಿ ಜರುಗಲಿದೆ. ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಗಣಪತಿ ಟಿ.ಶ್ರೀಯಾನ್ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಗರ್ವನರ್ ಸಿ.ಎ.ದೇವಾನಂದ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮತ್ತೋದ್ಯಮಿ ಆನಂದ್ ಸಿ.ಕುಂದರ್, ರೋಟರಿಯ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಗಣಪತಿ ಟಿ.ಶ್ರೀಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net