ರಕ್ಷಣಾ ಇಲಾಖೆಗಳ ಮುಖ್ಯಸ್ಥ ಜನರಲ್‌ ಅನಿಲ್‌ ಚೌಹಾಣ್‌ ಕಾರವಾರಕ್ಕೆ ಭೇಟಿ

CDS-Anil-chauhan-visit-Karwar-Kadamba-navel-base
Published on

ಕಾರವಾರ: ಭವಿಷ್ಯದ ಸವಾಲುಗಳಿಗೆ ಕಾರವಾರ ನೌಕಾನೆಲೆ ಸಿದ್ಧವಾಗಬೇಕಿದೆ ಎಂದು ಭಾರತೀಯ ರಕ್ಷಣಾ ಇಲಾಖೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಹೇಳಿದರು.
ಇಲ್ಲಿನ ಕದಂಬ ನೌಕಾನೆಲೆಗೆ ಹಾಗೂ ವಿಮಾನ ವಾಹಕ ನೌಕೆ ವಿಕ್ರಮಾದಿತ್ಯಕ್ಕೆ ಅವರು ಶನಿವಾರ ಭೇಟಿ ನೀಡಿದರು. ಸೀಬರ್ಡ್ ನೌಕಾ ಯೋಜನೆಯ ಎರಡನೇ ಹಂತದ ವಿಸ್ತರಣೆ ಕಾಮಗಾರಿಗಳು, ಇಲ್ಲಿ ಸಿದ್ಧವಾಗುತ್ತಿರುವ ಮೂಲ ಸೌಕರ್ಯಗಳು, ವಸತಿ ಮುಂತಾದ ಪ್ರಗತಿಯನ್ನು ಅವರು ವೀಕ್ಷಿಸಿದರು. ರಕ್ಷಣಾ ಕಾಮಗಾರಿ ಮಂಡಳಿಯ ಅಧ್ಯಕ್ಷರೂ ಆಗಿರುವ ಅವರು ಹಿರಿಯ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದರು.

ಇದನ್ನೂ ಓದಿ:ಕದಂಬಕ್ಕೆ ಕರಂಬೀರ್ ಸಿಂಗ್ ಭೇಟಿ
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ಪರಿಸ್ಥಿತಿಯ ರಕ್ಷಣಾ ವ್ಯವಸ್ಥೆಗೆ ಅನುಗುಣವಾಗಿ ಕಾರವಾರ ನೌಕಾನೆಲೆ ಅಭಿವೃದ್ಧಿಯಾಗುತ್ತಿದೆ. ಭಾರತೀಯ ಸಮುದ್ರ ಗಡಿಯ ರಕ್ಷಣೆಗೆ ಸ್ಪಂದಿಸುವ ಸಾಮರ್ಥ್ಯವನ್ನು ಕಾರವಾರ ನೌಕಾನೆಲೆ ಪಡೆದಿದೆ. ಸಾಕಷ್ಟು ಮುಂದಾಲೋಚನೆಯಿಂದ ಕಾರವಾರವನ್ನು ಒಂದು ನೌಕಾನೆಲೆಯಾಗಿ ಅಭಿವೃದ್ಧಿ ಮಾಡಲಾಗಿದೆ ಎಂದು ಜನರಲ್‌ ಚೌಹಾಣ್‌ ಹೇಳಿದರು. ಕರ್ನಾಟಕ ನೌಕಾ ವಲಯ ಮುಖ್ಯಸ್ಥ ರಿಯರ್ ಅಡ್ಮಿರಲ್ ಕೆಎಂ ರಾಮಕೃಷ್ಣ, ಇತರ ಹಿರಿಯ ಅಧಿಕಾರಿಗಳು ಇದ್ದರು.

ಮಾಹಿತಿಗೆ ಈ ಲಿಂಕ್‌ ಒತ್ತಿ: https://twitter.com/IN_KTKNA/status/1705848070481834480?t=UkcE7M5TgbugT14XfRYyiw&s=19

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net