ಕದಂಬಕ್ಕೆ ಕರಂಬೀರ್ ಸಿಂಗ್ ಭೇಟಿ

22KWR3
Published on

ಕಾರವಾರ: ಕೋವಿಡ್-19 ಸಮಯದಲ್ಲಿ ಇಲ್ಲಿನ ಕದಂಬ ನೌಕಾನೆಲೆಯ ಕಾರ್ಯಕ್ಕೆ ಭಾರತೀಯ ನೌಕಾಸೇನೆ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕದಂಬ ನೌಕಾನೆಲೆಗೆ ಗುರುವಾರ ಭೇಟಿ ನೀಡಿದ ಅವರು ಇಲ್ಲಿನ ಅಧಿಕಾರಿಗಳ ಜತೆ ರ್ಚಚಿಸಿದರು. ಐಎನ್​ಎಸ್ ಪತಂಜಲಿ ಆಸ್ಪತ್ರೆ ಉತ್ತರ ಕನ್ನಡದ ಸಾರ್ವಜನಿಕರಿಗೆ ಕೋವಿಡ್-19 ಚಿಕಿತ್ಸೆ ನೀಡುವ ಮೂಲಕ ದೇಶದಲ್ಲೇ ಮಾದರಿಯಾಗಿದೆ ಎಂದು ಅವರು ಹೇಳಿದರು.

ಅಲ್ಲದೆ, ಕೋವಿಡ್​ನಂಥ ಕ್ಲಿಸ್ಟ ಪತಿಸ್ಥಿತಿಯಲ್ಲಿ ಕಾರವಾರದ ನೌಕಾ ಹಡಗು ರಿಪೇರಿ ತಾಣ (ಎನ್​ಎಸ್​ಆರ್​ವೈ)ನಲ್ಲಿ ಯುದ್ಧ ಹಡಗು ಹಾಗೂ ಜಲಾಂತರ್ಗಾಮಿಗಳ ರಿಪೇರಿ ಹಾಗೂ ನಿರ್ವಹಣೆಯನ್ನು ಸರಿಯಾದ ಅವಧಿಗೆ ಮಾಡುವ ಮೂಲಕ ದೇಶದ ರಕ್ಷಣೆ ಹಾಗೂ ಕಾರ್ಯಾಚರಣೆಯ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ ಎಂದು ಅಡ್ಮಿರಲ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಡ್ಮಿರಲ್ ಕರಂಬೀರ್ ಸಿಂಗ್ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net