

ಕನಕಪುರ: ರಾಜ್ಯ ಅರಣ್ಯ ಇಲಾಖೆ 71ನೇ ವನ್ಯಜಿವಿ ಸಪ್ತಾಹದ ಪ್ರಯುಕ್ತ ಮಾನವ&ವನ್ಯಜಿವಿ ಸಹಬಾಳ್ವೆ ಧ್ಯೇಯ ವಾಕ್ಯದೊಂದಿಗೆ ಅ.2ರಿಂದ 7ರವರೆಗೆ ಆಯೋಜಿಸಿದ್ದ ಸ್ಪರ್ಧಾ ಕಾರ್ಯಕ್ರಮದಲ್ಲಿ ಆದಿತ್ಯಾ'ಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿ ಮುಖ್ಯಮಂತ್ರಿಗಳಿಂದ ಬಹುಮಾನ ಪಡೆದೆರು.
ಪಿಯುಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ವರ್ಷಿಣಿ.ಆರ್. ಪ್ರಥಮ ಸ್ಥಾನ, ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ತಸ್ಲಿಂ.ಎಂ.ಐ ಪ್ರಥಮ ಸ್ಥಾನ ಹಾಗೂ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕೃತಿಕಾ.ಎಲ್.ಜಿ ತೃತೀಯ ಸ್ಥಾನ ಪಡೆದಿದ್ದಾರೆ.
ವಿಧಾನಸೌಧದ ಬ್ಲಾಂಕ್ವೆಟ್ ಹಾಲ್ನಲ್ಲಿ ಬುಧವಾರ ಜರುಗಿದ ಸಮಾರೋಪ ಸಮಾರಂಭದಲ್ಲಿ ಮೂವರು ವಿದ್ಯಾರ್ಥಿನಿಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಮತ್ತು ಬಹುಮಾನ ಸ್ವೀಕರಿಸಿದರು.