

ವಿಜಯಪುರ: ಕರೊನಾ ಲಾಕ್ಡೌನ್ ಎಫೆಕ್ಟ್ ಇದೀಗ ಚಿಕನ್ ಪ್ರಿಯರಿಗೆ ಹಾಗೂ ಮುಸ್ಲಿಂ ಬಾಂಧವರ ಮೇಲೆ ಬೀರಿದ್ದು, ವಿಜಯಪುರದ ಚಿಕನ್ ಮಾರುಕಟ್ಟೆ ಶಾಕ್ ನೀಡಿದೆ.
ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಕೋಳಿಗೆ ಭಾರೀ ಬೇಡಿಕೆ ಬಂದಿದೆ. ಆದ್ದರಿಂದಲೇ ವಿಜಯಪುರದಲ್ಲಿ ರಾತ್ರೋ ರಾತ್ರಿ ಒನ್ ಟು ಡಬಲ್ ರೇಟ್ ಆಗಿದೆ. ಹೋಲ್ಸೇಲ್ ಮಾರುಕಟ್ಟೆಯಲ್ಲೇ ಕೋಳಿ ದರ ಗಗನಕ್ಕೇರಿದೆ. ಈ ಮೊದಲು ಕೆಜಿ ಚಿಕನ್ ಗೆ 120 ಇದ್ದ ಬೆಲೆ ಇದೀಗ ಏಕಾಏಕಿ 240 ರೂಪಾಯಿಗೆ ಏರಿಕೆ ಆಗಿದೆ.
ಇನ್ನು ಲಾಕ್ಡೌನ್ ಹಿನ್ನೆಲೆ ಎಲ್ಲೂ ಕೋಳಿ ಸಿಗದ ಕಾರಣ ಒಂದು ಕೇಜಿ ಚಿಕನ್ ಬೆಲೆ 240ಕ್ಕೆ ಹೆಚ್ಚಳವಾಗಿದೆ. ಇದರ ಜತೆಗೆ ಮಟನ್ ದರದಲ್ಲೂ ಸ್ವಲ್ಪ ಬೆಲೆ ಪ್ರಮಾಣದಲ್ಲಿ ಹೆಚ್ಚಳ ಆಗಿದ್ದು, ಮೊದಲು ಕೆಜಿ ಮಟನ್ಗೆ 550 ಇದ್ದ ಬೆಲೆ ಇದೀಗ ಕೆಜಿಗೆ 600 ಕ್ಕೇರಿದೆ. (ದಿಗ್ವಿಜಯ ನ್ಯೂಸ್)