More

    ಫೇಸ್​ಬುಕ್​ನ ವಿಭಿನ್ನ ಪ್ರೇಮ್​ ಕಹಾನಿ! 62ರ ಅಜ್ಜಿಗೆ ಮಿಸ್​ ಆಗಿ ಸಿಕ್ಕ 26ರ ಯುವಕ, ಮುಂದೆ?

    ಟುನೀಷಿಯಾ (ಉತ್ತರ ಆಫ್ರಿಕಾ): ಫೇಸ್​ಬುಕ್​ನಲ್ಲಿ ಪರಿಚಯವಾಗಿ ಮದುವೆಯಾದವರು ಅನೇಕ ಮಂದಿ ಇದ್ದಾರೆ. ಸುಂದರ ಯುವತಿ-ಯುವಕನ ಫೋಟೋ ಹಾಕಿ ಯಾಮಾರಿಸಿ ಮೋಸ ಮಾಡುವವರೂ ಅಷ್ಟೇ ಸಂಖ್ಯೆಯಲ್ಲಿ ಇದ್ದಾರೆ. ಅಚಾನಕ್​ ಆಗಿ ಫೇಸ್​ಬುಕ್​ನಲ್ಲಿ ಪರಿಚಯವಾಗಿ, ಪ್ರೇಮಪಾಶಕ್ಕೆ ಬಿದ್ದವರೂ ಕಡಿಮೇ ಏನಿಲ್ಲ.

    ಇಲ್ಲಿಯೂ ಅಂಥದ್ದೇ ಒಂದು ಘಟನೆ ನಡೆದಿದೆ. ಆದರೆ ಇಲ್ಲಿ ನಡೆದಿರುವುದು ಸ್ವಲ್ಪ ಡಿಫರೆಂಟ್​ ಅಷ್ಟೆ. ಇದು 62 ವರ್ಷದ ಅಜ್ಜಿ ಹಾಗೂ 26 ವರ್ಷದ ಯುವಕನ ನಡುವೆ ನಡೆದ ಪ್ರೇಮ ಕಥೆ.

    ಇದನ್ನೂ ಓದಿ: ಲಾಕ್​ಡೌನ್​ನಲ್ಲಿ ಆಶ್ರಯ ಕೋರಿ ಸ್ನೇಹಿತನ ಮನೆಗೆ ಬಂದ- ಅವನ ಪತ್ನಿಯ ನೋಡಿದ… ಮುಂದೆ ಎಲ್ಲವೂ ಅಲ್ಲೋಲ ಕಲ್ಲೋಲ…

    ಇದು ಟುನೇಷಿಯಾದ ಅಜ್ಜಿ ಇಸಾಬೆಲ್​ ಡಿಬಲ್​ ಹಾಗೂ ಇಂಗ್ಲೆಂಡ್​ನ ಕೆಂಟ್​ ಯುವಕ ಬೇರಾಮ್​ನ ಕಥೆ. ಇಸಾಬೆಲ್​ 10 ವರ್ಷದ ಮಗುವಿನ ಅಜ್ಜಿ. ಈಗಾಗಲೇ ಮೂವರು ಗಂಡಂದಿರನ್ನು ಕಳೆದುಕೊಂಡಿದ್ದ ಈಕೆ ಅದೊಂದು ದಿನ ಇಂಗ್ಲೆಂಡ್​ ಟೂರ್​ಗೆ ಹೋಗಿ ವಿಮಾನ ನಿಲ್ದಾಣದಲ್ಲಿ ಬರಿಸ್ತಾ ಕಾಫಿ ಷಾಪ್​ಗಾಗಿ ಇಂಟರ್​ನೆಟ್​ನಲ್ಲಿ ಹುಡುಕಾಟ ನಡೆಸುತ್ತಿದ್ದಳು.

    ಅದೇ ವೇಳೆ ಬೇರಾಮ್​ ಎಂಬ ವ್ಯಕ್ತಿಯ ಪರಿಯಚವಾಗಿ ಆತ ಬರಿಸ್ತಾಕ್ಕೆ ಕರೆದ.ತನ್ನ ಪರಿಚಯ ಮಾಡಿಕೊಂಡಿದದ ಆತ. ಆದರೆ ಈ ಅಜ್ಜಿ ಆತನ ಮನವಿ ತಿರಸ್ಕರಿಸಿದಳು. ನಂತರ ವಾಪಸಾದಾಗ ಈಕೆಗೆ ತಾನು ಮಾಡಿದ್ದು ಸರಿಯಿಲ್ಲ ಎಂದು ಎನಿಸಿ ಬೇರಾಮ್​ಗೆ ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸಿದಳು. ಹಾಗೂ ತನ್ನ ತಪ್ಪನ್ನು ಮನ್ನಿಸುವಂತೆ ಮೆಸೇಜ್​ ಕಳುಹಿಸಿದಳು. ಆದರೆ ಅದು ತಪ್ಪಿ 26 ವರ್ಷದ ಯುವಕ ಬೇರಾಮ್​ ಬೌಸಾಡಾ ಎಂಬ ವ್ಯಕ್ತಿಗೆ ಹೋಯಿತು.

    ಇದನ್ನೂ ಓದಿ: ವಲಸಿಗರ ಕ್ವಾರಂಟೈನ್​ ಕೇಂದ್ರದಲ್ಲಿ ಅತ್ತ ಅಶ್ಲೀಲ ನೃತ್ಯ, ಇತ್ತ ತುತ್ತು ಅನ್ನಕ್ಕೂ ಪರದಾಟ!

    ಅದನ್ನು ಅಕ್ಸೆಪ್ಟ್​ ಮಾಡಿ ಬೇರಾಮ್​. ನಂತರ ತನ್ನ ತಪ್ಪನ್ನು ಕ್ಷಮಿಸುವಂತೆ ಈಕೆ ಕೇಳಿಕೊಂಡ ರೀತಿ ಈ ಯುವಕನಿಗೆ ಇಷ್ಟವಾಗಿ ಹೋಯಿತು. ಹೀಗೆ ಪರಿಚಯವೇ ಇರದ ಇಬ್ಬರ ನಡುವೆ ಸ್ನೇಹ ಬೆಳೆಯಿತು. ಅಜ್ಜಿಯ ನಡವಳಿಕೆ, ಹೃದಯ ವೈಶಾಲ್ಯ ಎಲ್ಲವೂ ಈ ಯುವಕನಿಗೆ ಇಷ್ಟವಾಯಿತಂತೆ. ಅಜ್ಜಿಯೂ ಯುವಕ ಇಷ್ಟವಾಗಿ ಹೋದ.
    ಇಬ್ಬರ ನಡುವೆ ಸಲುಗೆ ಬೆಳೆಯಿತು. ಅದು ಪ್ರೇಮಕ್ಕೆ ತಿರುಗಿ ಮದುವೆಯಾಗುವ ನಿರ್ಧಾರಕ್ಕೆ ಬಂದರು. ನಿರ್ಧಾರ ಮಾತ್ರವಲ್ಲ, ಮದುವೆಯನ್ನೂ ಆದರು.

    ಈ ಬಗ್ಗೆ ಇಸಾಬೆಲ್​, ನಮ್ಮ ನಡುವೆ ತುಂಬಾ ವಯಸ್ಸಿನ ಅಂತರವಿದೆ ನಿಜ. ಆದರೆ ಅದು ನಮ್ಮ ನಡುವಿನ ಪ್ರೀತಿಗೆ ಅಡ್ಡಿ ಬರಲಿಲ್ಲ. ನನ್ನ ಈ ಹೊಸ ಗಂಡನಿಗೂ ಇದರ ಬಗ್ಗೆ ಎಳ್ಳಷ್ಟು ಬೇಸರವಿಲ್ಲ ಎಂದಿದ್ದಾಳೆ.

    ಇದನ್ನೂ ಓದಿ: ಪಿಒಕೆ ಭಾರತದ್ದೇ ಎಂದು ಒಪ್ಪಿಕೊಂಡುಬಿಟ್ಟಿತಾ ಪಾಕ್​? ಸಕತ್​ ಟ್ರೋಲ್​ ಆಗುತ್ತಿದ್ದಾರೆ ಪ್ರಧಾನಿ!

    ಇಸಾಬೆಲ್​ ಈಗಾಗಲೇ ಮೂವರು ಗಂಡಂದಿರನ್ನು ಕಳೆದುಕೊಂಡು ದುಃಖದಲ್ಲಿ ಇದ್ದಾಳೆ. ಅವಳ ನೋವನ್ನು ನಾನು ಬಲ್ಲೆ. ಇಂಥ ಹೆಂಗಸರ ಬಗ್ಗೆ ನಾನು ಸಾಕಷ್ಟು ಓದಿದ್ದೇನೆ. ಅದಕ್ಕಾಗಿ ಮದುವೆಯಾಗುವ ಮನಸ್ಸು ಮಾಡಿದೆ. ಆಕೆಯ ಹಣ, ಆಸ್ತಿ ಯಾವುದರ ಮೇಲೂ ನನಗೆ ಇಷ್ಟ ಇಲ್ಲ ಎಂದಿದ್ದಾನೆ ಬೇರಾಮ್​.

    ಈಗ ಇಬ್ಬರೂ ಹನಿಮೂನ್​ ಕೂಡ ಮುಗಿಸಿ ಬಂದಿದ್ದಾರೆ. ತನ್ನ ಹೆಂಡತಿಯನ್ನು ಬೇರಾಮ್​ ‘ನನ್ನ ಆತ್ಮ’ ಎಂದು ಕರೆಯುತ್ತಾನೆ. ಈ ಇಳಿ ವಯಸ್ಸಿನಲ್ಲಿ ಯುವಕನನ್ನು ಮದುವೆಯಾಗಿರುವುದಕ್ಕೆ ಮಕ್ಕಳು ಬೇಸರ ವ್ಯಕ್ತಪಡಿಸಿದ್ದಾರೆ. ಯುವಕನ ಜತೆ ಮದುವೆಯಾಗುವುದಾಗಿ ತಾಯಿ ಹೇಳಿದಾಗ ಬೇಸರವಾಯಿತು. ಅವನನ್ನು ಭೇಟಿಯಾಗಲು ಬೇರೆ ದೇಶಕ್ಕೆ ಒಂಟಿಯಾಗಿ ಹೋಗಿ ಬರುತ್ತಿದ್ದ ಸಂದರ್ಭದಲ್ಲಿ ತುಂಬಾ ಭಯ ಕೂಡ ಆಗಿತ್ತು. ಆದರೆ ಈಗ ಅವರು ಸುಖವಾಗಿ ಇದ್ದರೆ ನಮ್ಮದೇನೂ ಅಭ್ಯಂತರ ಇಲ್ಲ ಎನ್ನುತ್ತಿದ್ದಾರೆ ಮಕ್ಕಳು.

    ಮದುಮಗಳಂತೆ ಸಿಂಗರಿಸಿಕೊಂಡು 80 ಕಿ.ಮೀ ನಡೆದು ಬಂದ ಯುವತಿಯ ಕಂಡ ಗ್ರಾಮಸ್ಥರು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts