More

    ವಲಸಿಗರ ಕ್ವಾರಂಟೈನ್​ ಕೇಂದ್ರದಲ್ಲಿ ಅತ್ತ ಅಶ್ಲೀಲ ನೃತ್ಯ, ಇತ್ತ ತುತ್ತು ಅನ್ನಕ್ಕೂ ಪರದಾಟ!

    ಪಟ್ನಾ: ಬಿಹಾರದ ಕ್ವಾರಂಟೈನ್​ ಕೇಂದ್ರವೊಂದರಲ್ಲಿ ಇರುವ ವಲಸೆ ಕಾರ್ಮಿಕರನ್ನು ಸಂತೋಷ ಪಡಿಸುವ ನಿಟ್ಟಿನಲ್ಲಿ ಅಶ್ಲೀಲ ನೃತ್ಯಗಳ ಮೊರೆ ಹೋಗಿ ಭಾರಿ ಟೀಕೆಗೆ ಒಳಗಾಗಿದ್ದ ಸರ್ಕಾರ, ಅದೇ ಇನ್ನೊಂದೆಡೆ ಈ ಕಾರ್ಮಿಕರನ್ನು ತುತ್ತು ಅನ್ನಕ್ಕೂ ಪರದಾಡುವಂತೆ ಮಾಡಿರುವ ಆರೋಪಕ್ಕೆ ಗುರಿಯಾಗಿದೆ.

    ಸರಿಯಾದ ಆಹಾರ, ನೀರು, ಶೌಚಗೃಹ ಇಲ್ಲದೇ ಕಾರ್ಮಿಕರು ಕ್ವಾರಂಟೈನ್​ ಕೇಂದ್ರದಲ್ಲಿ ನರಕ ಸ್ಥಿತಿ ಅನುಭವಿಸುತ್ತಿರುವುದಾಗಿ ವರದಿಯಾಗಿವೆ. ಇದರಿಂದಾಗಿ ಇಲ್ಲಿ ಇರಲು ಆಗದೇ ಕಾರ್ಮಿಕರು ಗೋಡೆ ಹಾರಿ ಪಲಾಯನ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಕ್ವಾರಂಟೈನ್ ಕೇಂದ್ರದಲ್ಲಿ ರಾತ್ರಿ ಭರ್ಜರಿ ನೃತ್ಯ ಪ್ರದರ್ಶನ; ಜಿಲ್ಲಾಡಳಿತ ಕೆಂಡಾಮಂಡಲ

    ದೇಶದ ವಿವಿಧ ಭಾಗಗಳಿಂದ ಬಿಹಾರಕ್ಕೆ ಮರಳಿರುವ ವಲಸೆ ಕಾರ್ಮಿಕರನ್ನು ಮೊದಲು 14 ದಿನಗಳ ಕಾಲ ಕ್ಯಾರೆಂಟೈನ್ ಕೇಂದ್ರಗಳಲ್ಲಿ ಇಡಲಾಗಿದೆ. ಅಲ್ಲಿ ಅವರಿಗೆ ಯಾವುದೇ ವೈರಸ್​ ಪತ್ತೆಯಾಗದಿದ್ದ ಸಂದರ್ಭದಲ್ಲಿ ಮಾತ್ರ ಅವರನ್ನು ಮನೆಗೆ ಕಳುಹಿಸಲಾಗುತ್ತದೆ. ಆದರೆ ಇಲ್ಲಿ ವಲಸೆ ಕಾರ್ಮಿಕರ ಸ್ಥಿತಿ ಮಾತ್ರ ಅತ್ಯಂತ ಭಯಾನಕವಾಗಿದೆ.

    ಬಿಹಾರ ಸರ್ಕಾರ ನೀಡಿರುವ ಅಂಕಿಅಂಶಗಳ ಪ್ರಕಾರ, ಬಿಹಾರದಾದ್ಯಂತದ 7,840 ಕೇಂದ್ರಗಳಲ್ಲಿ ಸುಮಾರು 6.4 ಲಕ್ಷ ವಲಸೆ ಕಾರ್ಮಿಕರನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ. ನಿನ್ನೆ ಅಂದರೆ ಗುರುವಾರ, 50 ರೈಲುಗಳು ಪಾಟ್ನಾಕ್ಕೆ 60,000 ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಆಗಮಿಸಿದ್ದಾರೆ. ಕ್ವಾರಂಟೈನ್​ ಪೂರೈಸಿದರೆ ಧನ ಸಹಾಯ ಮಾಡುವುದಾಗಿ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಘೋಷಣೆ ಮಾಡಿದರೂ ಪಲಾಯನ ಮಾಡುತ್ತಿರುವ ಬಗ್ಗೆ ವರದಿಯಾಗಿದೆ.

    ಇದನ್ನೂ ಓದಿ:  ಕರೊನಾ: ನೂರರ ಗಡಿ ದಾಟಿದ ಐದು ಜಿಲ್ಲೆ- ಗುಣಮುಖರಾಗಲು ಕಾಯುತ್ತಿರುವವರು 1104!

    ಇದರಿಂದ ಆಡಳಿತ ಪಕ್ಷ ಪ್ರತಿಪಕ್ಷಗಳಿಂದ ಭಾರಿ ಟೀಕೆಗೆ ಒಳಗಾಗುತ್ತಿದೆ. ಇದೇ ವೇಳೆ, ವಲಸೆ ಕಾರ್ಮಿಕರು ವಾಪಸಾಗಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಕ್ವಾರಂಟೈನ್​ನಲ್ಲಿ ಇರುವವರು ಈ ರೀತಿ ಪಲಾಯನ ಮಾಡುತ್ತಾ ಹೋದರೆ ಸೋಂಕು ನಿಯಂತ್ರಣಕ್ಕೆ ಬರುವುದು ಅಸಾಧ್ಯವಾಗುತ್ತದೆ ಎಂದು ಪ್ರತಿಪಕ್ಷಗಳು ದೂರಿವೆ.

    ಅಶ್ಲೀಲ ನೃತ್ಯ ಮಾಡಿಸುವ ಬದಲು ವಲಸಿಗರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಅವು ಆಗ್ರಹಿಸಿವೆ.  ಇಂದಿನವರೆಗೆ ಬಿಹಾರದಲ್ಲಿ ಸೋಂಕಿತರ ಸಂಖ್ಯೆ 1982ಕ್ಕೆ ಏರಿದೆ. ಒಬ್ಬರು ಕೂಡ ಗುಣಮುಖರಾಗಿಲ್ಲ. ಈವರೆಗೆ 11 ಮಂದಿ ಇಲ್ಲಿ ಮೃತಪಟ್ಟಿದ್ದಾರೆ.

    ಹೀಗೂ ಆಗುವುದುಂಟು: ವಾಯುವಿಹಾರಕ್ಕೆ ಹೋದಾಗ ಲಕ್ಷಾಧಿಪತಿ, ಕಸದೊಂದಿಗೆ ಬಂದಾಗ ಕೋಟ್ಯಧಿಪತಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts