More

    ಮದುಮಗಳಂತೆ ಸಿಂಗರಿಸಿಕೊಂಡು 80 ಕಿ.ಮೀ ನಡೆದು ಬಂದ ಯುವತಿಯ ಕಂಡ ಗ್ರಾಮಸ್ಥರು ಶಾಕ್​!

    ಕಾನ್ಪುರ: ಲಾಕ್​ಡೌನ್​ನಿಂದಾಗಿ ಸಾವಿರಾರು ಮದುವೆಗಳು ಮುಂದಕ್ಕೆ ಹೋಗಿವೆ. ಎಷ್ಟೋ ಮದುವೆಗಳು ರದ್ದು ಕೂಡ ಆಗಿಬಿಟ್ಟಿವೆ. ಮದುವೆಯ ಕನಸು ಕಾಣುತ್ತಿರುವ ಮದುಮಕ್ಕಳಿಗಂತೂ ಲಾಕ್​ಡೌನ್​ ಮೇಲೆ ವಿಪರೀತ ಕೋಪ ಬಂದುಬಿಟ್ಟಿದೆ.

    ಈಗ ಲಾಕ್​ಡೌನ್​ ಸಡಿಲಿಕೆ ಮಾಡಿ, ಅನುಮತಿ ನೀಡಿದ್ದರೂ, ಮದುವೆಗೆ ಷರತ್ತು ವಿಧಿಸಿರುವುದರಿಂದ ಎಷ್ಟೋ ಮಂದಿ ಮದುವೆಯಾಗಲು ಹಿಂಜರಿಯುತ್ತಿದ್ದಾರೆ. ಬಂಧು, ಬಳಗ, ಸ್ನೇಹಿತರ ಮುಂದೆ ಮದುವೆಯಾಗಬೇಕೆನ್ನುವ ಹಂಬಲ ಇವರದ್ದು.

    ಇದನ್ನೂ ಓದಿ: ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಸ್ಥಾನ ಅಲಂಕರಿಸಿದ ಡಾ. ಹರ್ಷ್​ ವರ್ಧನ್​

    ಅದೇನೇ ಇರಲಿ. ಇಲ್ಲಿ ಹೇಳಹೊರಟಿರುವುದು ಮಾತ್ರ ಸ್ವಲ್ಪ ವಿಭಿನ್ನ ಸ್ಟೋರಿ. ರಾಜಸ್ಥಾನದ ಕಾನ್ಪುರದ ಬೈಸಾಪುರ 19 ವರ್ಷದ ಯುವತಿ ಗೋಲ್ಡಿಯ ಕಥೆ ಇದು. ಈಕೆಯ ಮದುವೆ 80 ಕಿ.ಮೀ ದೂರದಲ್ಲಿ ಇರುವ 23 ವರ್ಷದ ವೀರೇಂದ್ರ ಕುಮಾರ್ ರಾಥೋಡ್ ಜತೆ ನಿಶ್ಚಯವಾಗಿತ್ತು. ಮೊದಲು ಮದುವೆ ಮೇ 4 ಕ್ಕೆ ನಿಶ್ಚಯವಾಗಿತ್ತು. ಆದರೆ ಲಾಕ್​ಡೌನ್​ನಿಂದಾಗಿ ಮದುವೆಯನ್ನು ಮೇ 17ಕ್ಕೆ ಮುಂದೂಡಲಾಗಿತ್ತು. ಅಲ್ಲಿಯವರೆಗೆ ಎಲ್ಲವೂ ಸರಿಹೋಗುತ್ತೆ ಎಂದುಕೊಂಡಿದ್ದರಂತೆ. ಆದರೆ ಲಾಕ್​ಡೌನ್​ ಮೇ 31ರವರೆಗೆ ವಿಸ್ತರಣೆ ಆಗಿಹೋಯಿತು.

    ಇದು ಇಲ್ಲಿಗೇ ಮುಗಿಯುವಂತೆ ಕಾಣಿಸುವುದಿಲ್ಲ ಎಂದು ಯುವತಿಗೆ ಗೊತ್ತಾಯಿತು. ಸಾಲದು ಎಂಬುದಕ್ಕೆ ವೀರೇಂದ್ರನ ಪಾಲಕರು ಮದುವೆ ಮುಂದಕ್ಕೆ ಹಾಕುತ್ತಾ ಇರುವುದರಲ್ಲಿ ಪ್ರಯೋಜನ ಇಲ್ಲ ಎಂದಿದ್ದರು. ಆದರೆ ಗೋಲ್ಡಿ ಮನೆಯವರಿಗೆ ಲಾಕ್​ಡೌನ್​ ಮುಗಿದ ಮೇಲೆ ಧೂಮ್​ಧಾಮ್​ ಮದುವೆ ಮಾಡುವ ಇಚ್ಛೆ.

    ಇದನ್ನೂ ಓದಿ: ನಿಮ್ಮ ಫೋನ್​ನಲ್ಲಿ ಗೂಗಲ್​ ಮ್ಯಾಪ್​ ಇದ್ಯಾ? ಹಾಗಿದ್ರೆ ಈ ಅಮಾಯಕ ಗಂಡನ ಕಥೆ ಕೇಳಿ..!

    ಹೀಗೆಯೇ ಇದ್ದರೆ ತನ್ನ ಮದುವೆ ಆಗುವುದಿಲ್ಲ ಎಂದು ತಿಳಿದ ಗೋಲ್ಡಿ ಅದೊಂದ ನಿರ್ಧಾರಕ್ಕೆ ಬಂದೇ ಬಿಟ್ಟಳು. ಅದೇನೆಂದರೆ ಮದುಮಗನ ಮನೆಗೆ ಹೋಗಿ ಮದುವೆ ಮಾಡಿಕೊಳ್ಳುವುದು. ಆದರೆ ಹೇಗೆ? ಅವರಿದ್ದ ಊರಿನಲ್ಲಿ ಇನ್ನೂ ಸಾರಿಗೆ ವ್ಯವಸ್ಥೆ ಆಗಿರಲಿಲ್ಲ. ಬೇರೆ ವಾಹನವೂ ಇರಲಿಲ್ಲ.

    ಆದ್ದರಿಂದ ಗಟ್ಟಿ ಮನಸ್ಸು ಮಾಡಿದ ಮದುಮಗಳು, 80 ಕಿಲೋ ಮೀಟರ್​ ನಡೆದು ಕೊಂಡು ಹೋಗುವ ನಿರ್ಧಾರಕ್ಕೆ ಬಂದಳು. ಅದರಂತೆ ಕಳೆದ ಬುಧವಾರ (ಮೇ 20) ನಸುಕಿನಲ್ಲಿ ಮನೆಯಿಂದ ಹೊರಟ ಗೋಲ್ಡಿ ಸಂಜೆ ಹೊತ್ತಿಗೆ ವರನ ಮನೆ ತಲುಪಿದ್ದಳು. ಮದುಮಗಳಂತೆ ಸಿಂಗರಿಸಿಕೊಂಡು ತವರಿನಿಂದ ಹೊರಟುನಿಂತಳು.

    ವರನ ಗ್ರಾಮವನ್ನು ತಲುಪುತ್ತಿದ್ದಂತೆಯೇ ಅಪರಿಚಿತ ಯುವತಿಯ ಸಿಂಗಾರ ನೋಡಿ ಗ್ರಾಮಸ್ಥರು ಅಚ್ಚರಿಯಿಂದ ನೋಡತೊಡಗಿದರು. ಮದುಮಗಳನ್ನು ನೋಡಿದ ವರನ ಮನೆಯವರಿಗೂ ಶಾಕ್​. ನಂತರ ಎಲ್ಲವನ್ನೂ ಆಕೆ ವಿವರಿಸಿದಾಗ ಮದುವೆಗೆ ಸಂತೋಷದಿಂದ ಒಪ್ಪಿ ಗ್ರಾಮಸ್ಥರ ಸಮ್ಮುಖದಲ್ಲಿ ಮದುವೆ ಮಾಡಿಸಿದ್ದಾರೆ.

    ಇದನ್ನೂ ಓದಿ: ವಲಸಿಗರ ಕ್ವಾರಂಟೈನ್​ ಕೇಂದ್ರದಲ್ಲಿ ಅತ್ತ ಅಶ್ಲೀಲ ನೃತ್ಯ, ಇತ್ತ ತುತ್ತು ಅನ್ನಕ್ಕೂ ಪರದಾಟ!

    ಕರೊನಾ ವೈರಸ್​ ನಮ್ಮ ವಿವಾಹದ ಹಾದಿಯಲ್ಲಿ ಅಡ್ಡ ಬರಲು ಬಿಡಬಾರದು ಎಂದು ತೀರ್ಮಾನಿಸಿದೆ. ಹೀಗಾಗಿ ನಾನು ಯಾರಿಗೂ ತಿಳಿಸದೆ ಹುಡುಗನ ಮನೆಗೆ ಹೋದೆ ಎನ್ನುತ್ತಾಳೆ ಗೋಲ್ಡಿ. “80 ಕಿ.ಮೀ ದೂರ ಪ್ರಯಾಣದಲ್ಲಿ ನಾನು ಏನನ್ನೂ ಸೇವಿಸಲಿಲ್ಲ. ಬರೀ ನೀರು ಕುಡಿದೇ 12 ಗಂಟೆ ನಡೆದಿದ್ದೇನೆ. ಸಣ್ಣ ಚೀಲವೊಂದರಲ್ಲಿ ಬಟ್ಟೆ ಮತ್ತು ಅಗತ್ಯ ವಸ್ತುಗಳನ್ನ ತೆಗೆದುಕೊಂಡು ತೆರಳಿದ್ದೆ ಎಂದಿದ್ದಾಳೆ ಗೋಲ್ಡಿ. ಅಂತೂ ಈಗ ಮದುವೆಯಾಗಿ ಗಂಡನ ಮನೆಯಲ್ಲಿ ಇದ್ದಾಳೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts