

ಬೈಂದೂರು: ಉಪ್ಪುಂದ ತಾರಾಪತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಟ್ರಾಕ್‌ಸೂಟ್ ಉಚಿತ ವಿತರಣೆ ಹಾಗೂ ಚದುರಂಗ ತರಗತಿ ಉದ್ಘಾಟನಾ ಸಮಾರಂಭ ಗುರುವಾರ ಜರುಗಿತು.
ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಕೃಷ್ಣ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಗೆ ಉಚಿತವಾಗಿ 150 ಟ್ರಾಕ್‌ಸೂಟ್‌ಗಳನ್ನು ನೀಡಿದ ಹಳೇ ವಿದ್ಯಾರ್ಥಿ ಯೋಗೇಶ್‌ಕುಮಾರ್ ಪರವಾಗಿ ಅವರ ತಾಯಿ ವೆಂಕಮ್ಮ ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಗೆ ಚೆಸ್ ತರಬೇತಿಯನ್ನು ಉಚಿತವಾಗಿ ನೀಡಲಿರುವ ಹಳೇ ವಿದ್ಯಾರ್ಥಿ ಬಾಬು ಜೆ.ಪೂಜಾರಿ, ಹರೀಶ್ ಪೂಜಾರಿ, ಗೋಪಾಲ ಮಲ್ಯ, ಭಾಸ್ಕರ ಕೋಣನಮನೆ, ನಿವೃತ್ತ ಮುಖ್ಯ ಶಿಕ್ಷಕ ಆನಂದ ಶುಭ ಹಾರೈಸಿದರು. ಪ್ರಭಾರ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಸ್ವಾಗತಿಸಿದರು. ಟಿಜಿಟಿ ಶಿಕ್ಷಕ ದಿನಕರ ಜಿ. ವಂದಿಸಿದರು. ಜಿಪಿಟಿ ಶಿಕ್ಷಕ ಸಂದೀಪ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿಯರಾದ ಕಾವೇರಿ, ಮಾಲತಿ ಮರಾಠಿ, ಗೌರವ ಶಿಕ್ಷಕಿಯರು ಸಹಕರಿಸಿದರು.