ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವಸರಪಳಿ

kodi
ಕೋಡಿ ಗ್ರಾಪಂ ಆಡಳಿತದ ಮೇರೆಗೆ ಸಾಸ್ತಾನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೋಡಿ ಹೊಸಬೆಂಗ್ರೆ ಅಂಗನವಾಡಿ ಪುಟಾಣಿಗಳು, ಕಾರ್ಯಕರ್ತೆ, ಸಹಾಯಕಿ, ಪಾಲಕರೊಂದಿಗೆ ಗ್ರಾಪಂ ಅಧ್ಯಕ್ಷೆ ಗೀತಾಖಾರ್ವಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕೈಜೋಡಿಸಿದರು
Published on

ಕೋಟ: ಕೋಡಿ ಗ್ರಾಪಂ ಆಡಳಿತದ ಮೇರೆಗೆ ಸಾಸ್ತಾನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೋಡಿ ಹೊಸಬೆಂಗ್ರೆ ಅಂಗನವಾಡಿ ಪುಟಾಣಿಗಳು, ಕಾರ್ಯಕರ್ತೆ, ಸಹಾಯಕಿ, ಪಾಲಕರೊಂದಿಗೆ ಗ್ರಾಪಂ ಅಧ್ಯಕ್ಷೆ ಗೀತಾಖಾರ್ವಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕೈಜೋಡಿಸಿದರು.

ಪಂಚಾಯಿತಿ ಸದಸ್ಯರಾದ ಕೃಷ್ಣ ಪೂಜಾರಿ, ಪ್ರಭಾಕರ ಮೆಂಡನ್, ಸರಸ್ವತಿ, ಸಿಬ್ಬಂದಿ, ಸ್ತ್ರೀಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಈ ವೇಳೆ ಅಂಗನವಾಡಿ ಪುಟಾಣಿಗಳು ಸ್ವಾತಂತ್ರೃ ಹೋರಾಟಕ್ಕೆ ಮಣಿದ ವೀರರು, ಮಹಿಳಾ ಯೋಧರು, ಸುಭಾಷ್ ಚಂದ್ರ ಬೋಸ್, ಮಹಾತ್ಮ ಗಾಂಧೀಜಿ, ರಾಣಿ ಲಕ್ಷ್ಮೀ ಬಾಯಿ, ರಾಣಿ ಅಬ್ಬಕ್ಕ, ಕಿತ್ತುರೂ ರಾಣಿ ಚೆನ್ನಮ್ಮ, ಒನಕೆ ಓಬವ್ವ ವೇಷ-ಭೂಷಣ ಧರಿಸಿ ಪ್ರಜಾಪ್ರಭುತ್ವ ಮಾನವ ಸರಪಳಿಯನ್ನು ಅರ್ಥಪೂರ್ಣಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net