ಕ್ರೀಡೆಯಲ್ಲಿ ಗ್ರಾಮೀಣ ಮಕ್ಕಳೂ ಗುರುತಿಸಲಿ :ಶಿವರಾಮ ಶುಭಹಾರೈಕೆ

New Project (9)
Published on

ಪುತ್ತೂರು ಗ್ರಾಮಾಂತರ: ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಸಹಪಠ್ಯ ಚಟುವಟಿಕೆಗಳು ಕೂಡ ಬಹಳ ಮುಖ್ಯ. ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದ ಜತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ವಿಶ್ವಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂದು ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕ ಶಿವರಾಮ ಪಿ. ಈಶ್ವರಮಂಗಲ ಹೇಳಿದರು.

ಈಶ್ವರಮಂಗಲದ ಹನುಮಗಿರಿ ಶ್ರೀ ಗಜಾನನ ಆಂಗ್ಲಮಾಧ್ಯಮ ಶಾಲೆಯಲ್ಲಿ ಗುರುವಾರ ಪುತ್ತೂರು ಗ್ರಾವಾಂತರ ವಲಯಮಟ್ಟದ ಚೆಸ್ ಟೂರ್ನಿ ಉದ್ಘಾಟಿಸಿ ಮಾತನಾಡಿದರು.

ಪ್ರಾಂಶುಪಾಲ ಕೆ.ಶಾಮಣ್ಣ, ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಕಲಾ ಮತ್ತು ಪ್ರವೀಣ್ ಉಪಸ್ಥಿತರಿದ್ದರು. ಕ್ರೀಡಾ ನೋಡಲ್ ಅಧಿಕಾರಿ ಸುಧೀರ್ ರೈ ಪ್ರಸ್ತಾವನೆಗೈದರು. ಪ್ರೌಢಶಾಲೆ ಮುಖ್ಯ ಶಿಕ್ಷಕಿ ಸೌಮ್ಯಾ ಎ. ಸ್ವಾಗತಿಸಿದರು. ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಲತಾ ಡಿ.ಕೆ ವಂದಿಸಿದರು. ಪ್ರಸೀದಾ ಮತ್ತು ದಿವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ

ಸಮಾರೋಪ ಸಮಾರಂಭದಲ್ಲಿ ಶಾಲೆಯ ಸಂಚಾಲಕ ಶಿವರಾಮ ಪಿ. ಅಧ್ಯಕ್ಷತೆ ವಹಿಸಿದ್ದರು. ಸುಧೀರ್ ರೈ, ಹರಿಪ್ರಸಾದ್, ಕಿರಣ್‌ರಾಜ್, ಚಂದ್ರಕಲಾ, ವಾಣಿಶ್ರೀ, ಸೌಮ್ಯಾ ಎ., ಲತಾ.ಡಿ.ಕೆ ಉಪಸ್ಥಿತರಿದ್ದರು. ಅನುಶ್ರೀ ಸ್ವಾಗತಿಸಿದರು. ಪವಿತ್ರಾ ವಂದಿಸಿದರು. ಧನಲಕ್ಷ್ಮೀ ರೈ ಮತ್ತು ಸೌಮ್ಯಾ ಎಂ. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net