ಚೇರ್ಕಾಡಿ ಶೌರ್ಯ ತಂಡದ ವಾಷಿಕೋತ್ಸವ

kon (1)
Published on

ಕೊಕ್ಕರ್ಣೆ: ಚೇರ್ಕಾಡಿ ಶೌರ್ಯ ತಂಡದ 2ನೇ ವರ್ಷದ ವಾರ್ಷಿಕೋತ್ಸವವನ್ನು ಉಪ್ಪೂರು ಸ್ಪಂದನ ದಿವ್ಯಾಂಗರ ಆಶ್ರಮದಲ್ಲಿ ವಿಶೇಷವಾಗಿ ಆಚರಿಸಲಾಯಿತು.

ಬೆಳಗ್ಗೆ ಸತ್ಯನಾರಾಯಣ ಪೂಜೆ, ಭಜನೆ, ಸಭಾ ಕಾರ್ಯಕ್ರಮ ಜರುಗಿತು. ವಲಯ ಅಧ್ಯಕ್ಷ ಹರೀಶ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ, ತಾಲೂಕು ಜನಜಾಗೃತಿ ಅಧ್ಯಕ್ಷ ಹರೀಶ್ ಶೆಟ್ಟಿ ಚೇರ್ಕಾಡಿ, ವಲಯ ಜನಜಾಗೃತಿ ಅಧ್ಯಕ್ಷ ಮನೋಜ್ ಶೆಟ್ಟಿ, ಸ್ಪಂದನದ ಪ್ರಾಂಶುಪಾಲ ಜನಾರ್ದನ್, ನೂಜಿ ಶಾಲೆ ಮುಖ್ಯಶಿಕ್ಷಕ ರವಿ ಪೂಜಾರಿ, ಶೌರ್ಯ ಟಕ ಅಧ್ಯಕ್ಷ ಸತೀಶ್, ಉದ್ಯಮಿಗಳಾದ ತಡಾಲು ಸುರೇಶ್ ಶೆಟ್ಟಿ, ಕೆಂಜೂರು ದಿನೇಶ್ ಶೆಟ್ಟಿ, ಮೇಲ್ವಿಚಾರಕಿ ಆಶಾಲತಾ, ಚೇರ್ಕಾಡಿ ಒಕ್ಕೂಟ ಸೇವಾ ಪ್ರತಿನಿಧಿಗಳು, ವಿಎಲ್‌ಈ, ಒಕ್ಕೂಟ ಅಧ್ಯಕ್ಷರು, ಪದಾಧಿಕಾರಿಗಳು, ಶೌರ್ಯ ತಂಡದ ಸದಸ್ಯರು ಉಪಸ್ಥಿತರಿದ್ದರು. ಆಶಾಲತಾ ಸ್ವಾಗತಿಸಿ, ಉಮೇಶ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net