ಅಧ್ಯಾಪಕರೇ ವಿದ್ಯಾಸಂಸ್ಥೆಗಳ ಸ್ಫೂರ್ತಿಚೇತನರು

kota (2)
Published on

ಕೋಟ: ಶೈಕ್ಷಣಿಕ ಲೋಕದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ವಿವೇಕ ವಿದ್ಯಾಸಂಸ್ಥೆಗಳ ಅನನ್ಯ ಸಾಧನೆಗಳಿಗೆ ಇಲ್ಲಿನ ಅಧ್ಯಾಪಕರ ಶ್ರೇಷ್ಠತೆಯೇ ಕಾರಣ. ಅಧ್ಯಯನಶೀಲತೆಯೇ ಅಧ್ಯಾಪಕನ ಪ್ರಧಾನ ಲಕ್ಷಣವಾಗಿರಬೇಕು. ಜೀವಂತ ನಿದರ್ಶನಗಳೊಂದಿಗೆ ಬೋಧನೆಯ ಸೂಕ್ಷ್ಮ ವಿಚಾರಗಳ ಕುರಿತು ಬೆಳಕು ಚೆಲ್ಲಿ, ಅಧ್ಯಾಪಕರು ಸದಾ ಆತ್ಮಾವಲೋಕನಕ್ಕೆ ತೆರೆದು ಕೊಳ್ಳಬೇಕು ಎಂದು ಶಿಕ್ಷಣ ತಜ್ಞ ಮುನಿರಾಜ ರೆಂಜಾಳ ಅಭಿಪ್ರಾಯಪಟ್ಟರು.

ಇತ್ತೀಚೆಗೆ ಕೋಟದ ವಿವೇಕ ವಿದ್ಯಾಸಂಸ್ಥೆಯ ಹಿಂದಿನ ವಿದ್ಯಾರ್ಥಿ ಸಂವು ವಿವೇಕ ವಿದ್ಯಾಸಂಸ್ಥೆಗಳ ಅಧ್ಯಾಪಕರಿಗಾಗಿ ಆಯೋಜಿಸಿದ್ದ ‘ಗುರುವಿನ ಗುರಿ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಡಾ.ಪ್ರಭಾತ್ ಬಲ್ನಾಡ್ ಮಾತನಾಡಿ, ಪ್ರತಿಭಾವಂತ ಮಕ್ಕಳೊಂದಿಗೆ ಭಾವನಾತ್ಮಕ, ಸಾವಾಜಿಕ ಕಳಕಳಿ ಹೊಂದಿರುವ ಮತ್ತು ನಕಾರಾತ್ಮಕ ಮಕ್ಕಳಿರುತ್ತಾರೆ. ಸಹಜವಾದ ಭಿನ್ನತೆ ಹೊಂದಿರುವ ಇವರ ನಡುವೆ ಹೋಲಿಕೆ ಸಲ್ಲದು ಎಂದರು.

ವಿದ್ಯಾಸಂ ಅಧ್ಯಕ್ಷ ಪ್ರಭಾಕರ ಮಯ್ಯ ಉದ್ಘಾಟಿಸಿದರು. ವಿದ್ಯಾಸಂದ ಕಾರ್ಯದರ್ಶಿ ಎಂ.ರಾಮದೇವ ಐತಾಳ ಮಾತನಾಡಿದರು. ಪ್ರಾಂಶುಪಾಲ ಕೆ.ಜಗದೀಶ ನಾವಡ ಸ್ವಾಗತಿಸಿ, ರವಾನಂದ ಭಟ್ ವಂದಿಸಿದರು. ವಿವೇಕ ಹಿಂದಿನ ವಿದ್ಯಾರ್ಥಿ ಸಂ ಕಾರ್ಯದರ್ಶಿ ಸುಧಾಕರ.ಪಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net