

ಮಡಿಕೇರಿ: ಚೇರಂಬಾಣೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷರಾಗಿ ಬಾಚರಣಿಯಂಡ ಪಿ.ಸುಮನ್ ನಾಲ್ಕನೇ ಅವಧಿಗೆ, ಉಪಾಧ್ಯಕ್ಷರಾಗಿ ಪೊಡನೋಳನ ಟಿ.ಶ್ರೀನಿವಾಸ್ ಮೂರನೇ ಅವಧಿಗೆ ಇತ್ತೀಚೆಗೆ ಅವಿರೋಧ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಸಾಮಾನ್ಯ ವರ್ಗದಿಂದ ಅಯ್ಯಂಡ ಬಿ.ಬೆಳ್ಯಪ್ಪ, ಮುಕ್ಕಾಟಿ ಆರ್.ನಾಣಯ್ಯ, ಕುಂಞಳಿ ಪಿ.ಸಂತೋಷ್ ಕುಮಾರ್, ಕೂರನ ವಿ.ಕಿಶೋರ್ ಕುಮಾರ್, ಕೇಕಡ ಎಂ.ಸುಗುಣ, ನಾಳಿಯಮ್ಮಂಡ ಸಿ.ಜೀವನ್, ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಕೂರನ ಸುಶೀಲ ಅಪ್ಪಾಜಿ, ಚಿಯಬೆರ ವೀಣಾ ಸೋಮಯ್ಯ, ಪರಿಶಿಷ್ಟ ಪಂಗಡದಿಂದ ಎಂ.ಕೆ.ವಸಂತ ಹಾಗೂ ಪರಿಶಿಷ್ಟ ಜಾತಿ ಎಂ.ಸರಸಮ್ಮ ಅವಿರೋಧ ಆಯ್ಕೆಯಾದರು.
ಸಾಲಗಾರರಲ್ಲದ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ತೊತ್ತಿಯನ ಎಸ್.ಚೇತನ್ ನಿರ್ದೇಶಕರಾಗಿ ಗೆಲವು ಸಾಧಿಸಿದರು. ಒಟ್ಟು 13 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಗೆದ್ದುಕೊಂಡಿದ್ದಾರೆ.