ವಿದ್ಯುತ್​ ಸ್ಪರ್ಶಿಸಿ ಬಾಣಸಿಗ ಸಾವು

Published on

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಹಾಗೂ ಹೈದರಾಬಾದ್​ ಮಾರ್ಗದ ಹೆದ್ದಾರಿ 44ರ ಬದಿಯ ಡಾಬಾ ಮುಂಭಾಗದಲ್ಲಿನ ವಿದ್ಯುತ್​ ತಂತಿ ಸ್ಪರ್ಶಿಸಿ ಬಾಣಸಿಗ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.ಉತ್ತರ ಪ್ರದೇಶದ ಬಾಣಸಿಗ ಪಧಮ್​ (34) ಮೃತ. ತಾಲೂಕಿನ ಹೊನ್ನೇನಹಳ್ಳಿ ಸಮೀಪದ ಖಾಸಗಿ ಡಾಬಾ ಮುಂಭಾಗ ಅವಡ ಸಂಭವಿಸಿದೆ. ಡಾಬಾ ಹಿಂಭಾಗದಲ್ಲಿ ನೀರಿನ ಟ್ಯಾಂಕ್​ ಮೂಲಕ ಪೆಟ್ಟಿಗೆ ಅಂಗಡಿ ಮೇಲೆ ನಿಂತ ಪಧಮ್​ ವಿದ್ಯುತ್​ ತಂತಿಯನ್ನು ಇದ್ದಕ್ಕಿದ್ದಂತೆ ಹಿಡಿದುಕೊಂಡಿದ್ದು ಶಾಕ್​ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದೆಲ್ಲವೂ ಸಿಸಿ ಕ್ಯಾಮರಾ ದೃಶ್ಯದಲ್ಲಿ ಸೆರೆಯಾಗಿದೆ.

ಆಕಸ್ಮಿಕ ದುರ್ಟನೆ?: ಹೊಸದಾಗಿ ಪ್ರಾರಂಭವಾಗಿರುವ ಅಂಗಡಿಯ ಉದ್ಘಾಟನೆ ಇತ್ತು. ಇದಕ್ಕೆ ಮೇಲಕ್ಕೆ ಹತ್ತಿ ತಳಿರು ತೋರಣ ಕಟ್ಟಲು ಪಧಮ್​ ಮುಂದಾಗಿದ್ದ. ಇದೇ ವೇಳೆ ನೀರಿನ ಪ್ಲಾಸ್ಟಿಕ್​ ಟ್ಯಾಂಕ್​ ಮೇಲೆ ಕಾಲು ಜಾರಿ ಬೀಳುವಾಗ ವಿದ್ಯುತ್​ ತಂತಿಯನ್ನು ಹಿಡಿದುಕೊಂಡಿದ್ದಾನೆ. ಇದರಿಂದ ಮೃತಪಟ್ಟಿದ್ದಾನೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ. ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net