

ತುಮಕೂರು: ತಿಪಟೂರು ತಾಲೂಕು ಮದ್ಲೆಹಳ್ಳಿ ಗ್ರಾಮದ ತೋಟದಲ್ಲಿ ಬೋನಿಗೆ ಬಿದ್ದ ಚಿರತೆ ನಂತರ ತೋಟದಲ್ಲಿ ಸಂಭವಿಸಿದ ಅಗ್ನಿ ಅನಾಹುತದ ವೇಳೆ ಹೊಗೆಯಿಂದ ಉಸಿರುಕಟ್ಟಿ ಮೃತಟ್ಟಿದ್ದು ಇದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಯ ರ್ನಿಲಕ್ಷ$್ಯವೇ ಕಾರಣ ಎಂಬ ಮಾಧ್ಯಮಗಳ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಚಿರತೆ ಅಸಹಜ ಸಾವಿನ ಕುರಿತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದರ್ಜೆ ಅಧಿಕಾರಿಯಿಂದ ಸ್ಥಳ ತನಿಖೆ ನಡೆಸಿ, ಅರಣ್ಯ ಸಿಬ್ಬಂದಿ ರ್ನಿಲಕ್ಷ$್ಯ ಇದ್ದಲ್ಲಿ ಕಾನೂನು ಕ್ರಮಕೈಗೊಳ್ಳುವಂತೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಖಡಕ್ ಸೂಚನೆ ನೀಡಿದ್ದಾರೆ.
ಬೆಂಕಿಯಲ್ಲಿ ಬೆಂದ ಚಿರತೆ: ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದ್ದರೂ ಈ ಬಗ್ಗೆ ಅರಣ್ಯ ಇಲಾಖೆ ರ್ನಿಲಕ್ಷ್ಯದಿಂದ ಚಿರತೆ ಆಕಸ್ಮಿಕ ಬೆಂಕಿಗೆ ತುತ್ತಾಗಿ ಪ್ರಾಣ ಬಿಟ್ಟಿದೆ. ಚಿರತೆ ಸಾವಿಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿಯೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಮದ್ಲೇಹಳ್ಳಿಯ ನಾರಾಯಣಪ್ಪ ಎಂಬುವರ ಜಮೀನಿನಲ್ಲಿ ಚಿರತೆ ಸೆರೆಗೆ ಬೋನ್ ಇಟ್ಟಿತ್ತು. ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿದೆ. ಆದರೆ ಮಂಗಳವಾರ ಈ ಭಾಗದಲ್ಲಿ ಆಕಸ್ಮಿಕ ಅಗ್ನಿ ಅವಘಡ ಉಂಟಾಗಿ, ಚಿರತೆ ಸೆರೆಯಾಗಿದ್ದ ಬೋನಿನ ಕಡೆಗೂ ಬೆಂಕಿ ಹರಡಿದ್ದು, ಬೋನಿನಿಂದ ಹೊರಬರಲಾರದ ಚಿರತೆ ದಟ್ಟ ಹೊಗೆ, ಬೆಂಕಿ ತಾಪಕ್ಕೆ ಸಿಕ್ಕಿ ಉಸಿರುಕಟ್ಟಿ ಮೃತಪಟ್ಟಿದೆ.
ಮಂಗಳವಾರ ಸಂಜೆ ಸ್ಥಳಕ್ಕೆ ಧಾವಿಸಿದ ಕೆ.ಬಿ.ಕ್ರಾಸ್ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯ ಮರಣೋತ್ತರ ಪರೀಕ್ಷೆ ನಂತರ ಕಳೇಬರವನ್ನು ವಿಲೇವಾರಿ ಮಾಡಿದ್ದು, ಕೆ.ಬಿ. ಕ್ರಾಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.