ಗೃಹಚೇತನ ಯೋಜನೆಯಡಿ ಆಯ್ಕೆಯಾದವರಿಗೆ ಚೆಕ್ ಹಸ್ತಾಂತರ

cheque
ಕುಂದಾಪುರ ತಾಲೂಕು ಯುವ ಬಂಟರ ಸಂಘದ ಗ್ರಹಚೇತನ ಯೋಜನೆಯಡಿ ಆಯ್ಕೆಯಾದವರಿಗೆ ಚೆಕ್ ವಿತರಿಸಲಾಯಿತು
Published on

ಗಂಗೊಳ್ಳಿ: ಕುಂದಾಪುರ ತಾಲೂಕು ಯುವ ಬಂಟರ ಸಂಘದ ಗೃಹಚೇತನ ಯೋಜನೆಯಡಿ ಆಯ್ಕೆಯಾದವರಿಗೆ ಚೆಕ್ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಕುಂದಾಪುರ ತಾಲೂಕು ಕಮಲಶಿಲೆ ಗ್ರಾಮದ ಸ್ವಾತಿ ಶೆಟ್ಟಿ ಅವರಿಗೆ ಸಂಘದ ದಶಮ ಸಂಭ್ರಮದ ಮಹಾಪೋಷಕ, ಹೈದರಾಬಾದ್‌ನ ಹೊಟೇಲ್ ಉದ್ಯಮಿ ಎಚ್. ಚಂದ್ರ ಶೆಟ್ಟಿ ಅವರ ಶಿಫಾರಸಿನ ಮೇರೆಗೆ 50 ಸಾವಿರ ರೂ. ಹಣ ಹಾಗೂ ಕುಂದಾಪುರ ತಾಲೂಕು ಕೊರ್ಗಿ ಗ್ರಾಮದ ದಬ್ಬೆಕಟ್ಟೆ ನಿವಾಸಿ ಕುಸುಮ ಶೆಟ್ಟಿ ಅವರಿಗೆ ಸಂಘದ ದಶಮ ಸಂಭ್ರಮದ ಪೋಷಕ ಸಳ್ವಾಡಿ ಚಂದ್ರಶೇಖರ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ ಸಂಘದ ವತಿಯಿಂದ 30 ಸಾವಿರ ರೂ. ಹಣ ಚೆಕ್ ಮೂಲಕ ಹಸ್ತಾಂತರಿಸಲಾಯಿತು.

ಸಂಘ ಗೌರವಾಧ್ಯಕ್ಷ ಬಿ.ಉದಯ ಕುಮಾರ್ ಶೆಟ್ಟಿ, ದಶಮ ಸಂಭ್ರಮದ ಮಹಾಪೋಷಕ ಎಚ್. ಚಂದ್ರ ಶೆಟ್ಟಿ, ಪೋಷಕರಾದ ಅಲ್ತಾರು ಸುಧಾಕರ ಶೆಟ್ಟಿ, ಸಳ್ವಾಡಿ ಚಂದ್ರಶೇಖರ ಶೆಟ್ಟಿ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ನಿತೀಶ್ ಶೆಟ್ಟಿ ಬಸ್ರೂರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net