ನಿವೃತ್ತ ಬ್ಯಾಂಕ್‌ ಉದ್ಯೋಗಿಯ ಖಾತೆಗೇ ಕನ್ನ ಹಾಕಿದ ಖದೀಮ

Cheating to retired bank employ
Published on

ಕಾರವಾರ:ಮನೆಯನ್ನು ಬಾಡಿಗೆಗೆ ಪಡೆಯುವ ನೆಪದಲ್ಲಿ ಕರೆ ಮಾಡಿ, ನಿವೃತ್ತ ಬ್ಯಾಂಕ್ ಉದ್ಯೋಗಿಯ ಖಾತೆಯಿಂದ 50 ಸಾವಿರ ರೂ. ಲಪಟಾಯಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಇಲ್ಲಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ನಂದನಗದ್ದಾದ ಘನಶ್ಯಾಮ ನೀಲಕಂಠ ಜೋಷಿ ಎಂಬ 74 ವರ್ಷದ ವೃದ್ಧರೊಬ್ಬರು ಮೋಸವಾದ ಬಗ್ಗೆ ದೂರು ನೀಡಿದ್ದಾರೆ. ಅವರು ಮಂಗಳೂರಿನಲ್ಲಿ ಮನೆ ಹೊಂದಿದ್ದು, ಅದನ್ನು ಬಾಡಿಗೆ ನೀಡುವುದಾಗಿ ಮ್ಯಾಜಿಕ್ ಬ್ರಿಕ್ಸ್ ಎಂಬ ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಿದ್ದರು.

ತಾನು ಸೈನಿಕ ಎಂದು ಕರೆ ಮಾಡಿದ ವ್ಯಕ್ತಿ ಮನೆ ಬಾಡಿಗೆಗೆ ಪಡೆಯುವುದಾಗಿ ಹೇಳಿದ್ದ. ಅದರ ಠೇವಣಿ ಹಣವನ್ನು ಪೋನ್ ಪೇ ಮಾಡುವುದಾಗಿ ತಿಳಿಸಿದ್ದ. ನೀವು ಪೋನ್ ಪೇ ಆ್ಯಪ್‌ನಲ್ಲಿ 50 ಸಾವಿರ ನಮೂದಿಸಿ ಒಟಿಪಿ ಹಾಕಿ ಎಂದು ನಂಬಿಸಿ ಮೋಸ ಮಾಡಿ ತನ್ನ ಖಾತೆಗೆ ಹಣ ಜಮಾ ಮಾಡಿಸಿಕೊಂಡಿದ್ದ. ಖಾತೆಯಿಂದ ಹಣ ಕಡಿತವಾಗಿದ್ದನ್ನು ಕಂಡು ತಮಗೆ ಮೋಸವಾಗಿದ್ದು ಅರಿವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net