ಕೆಇಎ ಪರೀಕ್ಷೆ ಅಕ್ರಮ; ಏಳು ಜನ ಪೊಲೀಸ್ ಕಸ್ಟಡಿಗೆ, ಈ ಮಾಹಿತಿ ಕಲೆಹಾಕಲು ಮುಂದಾದ ಪೊಲೀಸರು

kea
Published on

ಕಲಬುರಗಿ: ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿ ಬಂಧಿತರಾಗಿದ್ದ ಏಳು ಜನರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ನ್ಯಾಯಾಂಗ ಬಂಧನದಿಂದ ಅಫಜಲಪುರ ಪೊಲೀಸರು ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.

ಎಂಟು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಮೂರು ಜನ ಅಭ್ಯರ್ಥಿಗಳ ಜೊತೆಗೆ ಉತ್ತರ ಹೇಳಿದ ನಾಲ್ಕು ಜನ ಸೇರಿ ಒಟ್ಟಾರೆ ಏಳು ಜನರನ್ನು ಪೊಲೀಸ್ ಕಸ್ಟಡಿಗೆ ತೆಗದುಕೊಳ್ಳಲಾಗಿದೆ.

ಅಭ್ಯರ್ಥಿಗಳಾದ ಆಕಾಶ್ ಮಂಠಾಳೆ , ಸಂತೋಷ್ ಯಾಳಗಿ , ಬಾಬು , ಉತ್ತರ ಹೇಳಿದ ಗುರುರಾಜ್, ವಿಜಯಕುಮಾರ್, ಗಣೇಶ್ ,ಬಾಪು ಯಾಳಗಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳಿಂದ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕಲು ಮುಂದಾಗಿದ್ದು, ಬ್ಲೂಟೂತ್ ಡಿವೈಸ್ ಕೊಟ್ಟವರು ಯಾರು? ಎಷ್ಟಕ್ಕೆ ಡೀಲ್ ಮಾಡಿದ್ದಾರೆ, ಅಕ್ರಮದಲ್ಲಿ ಇನ್ನು ಯಾರೆಲ್ಲಾ ಅಭ್ಯರ್ಥಿಗಳು ಭಾಗಿಯಾಗಿದ್ದಾರೆ ಅನ್ನೋ ಬಗ್ಗೆ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net