

ಬೆಂಗಳೂರು: ದರ್ಶನ್ ಹೆಸರಲ್ಲಿ 25 ಕೋಟಿ ರೂ. ವಂಚನೆ ಯತ್ನ ಪ್ರಕರಣಕ್ಕೆ ನಟ ದರ್ಶನ್ ಮತ್ತು ಉಮಾಪತಿ ತಿಲಾಂಜಲಿ ಹಾಡಿದ್ದಾರೆ. ಒಂದಾಗಿದ್ದೇವೆ ಮುಂದೆಯೂ ಒಂದಾಗಿರೋಣ ಅನ್ನೊ ಸಂದೇಶವನ್ನು ರಾಬರ್ಟ್ ದೋಸ್ತಿ ಸಾರಿದೆ.
ಇಬ್ಬರು ಒಟ್ಟಿಗೆ ಸೇರಿ ಕ್ಯಾಮೆರಾಗೆ ಪೋಸ್ ನೀಡುವ ಮೂಲಕ ವಿವಾದಕ್ಕೆ ರಾಬರ್ಟ್ ದೋಸ್ತಿ ತೆರೆ ಎಳೆದಿದೆ. ಅಲ್ಲದೆ, ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಉಮಾಪತಿ ನಿರಾಕರಿಸಿದ್ದಾರೆ.
ಈ ವಿಚಾರವನ್ನು ಇಲ್ಲಿಗೆ ನಿಲ್ಲಿಸೋಣ ನಿರ್ಮಾಪಕರೆ, ಈ ವಿಷಯದ ಬಗ್ಗೆ ನಾವು ಮಾತನಾಡೋದು ಬೇಡ ಎಂದು ದರ್ಶನ್ ಅವರು ಹೇಳಿದ್ದಾರೆ. ಆರೋಪಿ ಅರುಣಾ ಕುಮಾರಿ ಬೇಕಾದ್ರೆ ಮಾತಾಡಲಿ, ಪೊಲೀಸ್ ಶೈಲಿಯಲ್ಲಿ ತನಿಖೆ ಆದ್ರೆ ಸತ್ಯಾಂಶ ಹೊರಬರಲಿದೆ ಎಂದರು.
ಈ ಪ್ರಕರಣಕ್ಕೆ ಸಂಹರಿಸಿದ ದಾಖಲೆಗಳ ಬಗ್ಗೆ ಕಾಯ್ತಿದ್ದೀವಿ. ದಾಖಲೆ ಸಿಕ್ಕ ತಕ್ಷಣ ದರ್ಶನ್ ಸರ್ ನಾನು ಇಬ್ಬರು ಪ್ರೆಸ್ ಮೀಟ್ ಮಾಡಿ ಮಾಹಿತಿ ನೀಡ್ತಿವಿ. ಇನ್ನೆರಡು ದಿನಗಳಲ್ಲಿ ದರ್ಶನ್ ಸರ್ ಮತ್ತು ನಾನು ಕಮಿಷನ್ ಅವರ ಭೇಟಿ ಮಾಡ್ತೀವಿ ಎಂದು ಉಮಾಪತಿ ಮಾಹಿತಿ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)